ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ – ಗಿಲ್ಲಿಯನ್ನು ಅಭಿನಂದಿಸಿದ ಕಾವ್ಯ

1 Min Read

ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು (Gilli Nata) ನಟಿ ಕಾವ್ಯ ಶೈವ (Kavya Shaiva) ಅಭಿನಂದಿಸಿದ್ದಾರೆ. ಆದಷ್ಟು ಬೇಗ ಆಕ್ಷನ್‌ ಕಟ್‌ ಹೇಳುವ ಹಾಗೇ ಆಗ್ಲಿ ಎಂದು ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ ಅವರು, ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಹೇ ಗಿಲ್ಲಿ ಅಭಿನಂದನೆಗಳು ಕಣೋ. ಝೀರೋದಿಂದ ಹೀರೋ ಆಗಿದ್ಯಾ. ಆದಷ್ಟು ಬೇಗ ಆಕ್ಷನ್‌ ಕಟ್‌ ಹೇಳುವ ಹಾಗೇ ಆಗ್ಲಿ. ತುಂಬಾ ತುಂಬ ಒಳ್ಳೇದಾಗ್ಲಿ ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ಫಿನಾಲೆಯ ಟಾಪ್‌-6ನಲ್ಲಿ ಸ್ಥಾನ ಪಡೆದಿದ್ದ ಕಾವ್ಯ ಧನುಷ್‌, ರಘು ನಂತರ ನಾಲ್ಕನೇಯವಾಗಿ ಹೊರ ಬಂದಿದ್ದರು. ಗಿಲ್ಲಿ ಮತ್ತು ಕಾವ್ಯ ಜೋಡಿಗೆ ಜನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಿಲ್ಲಿ ಅವರು ಆಗಾಗ ಕಾವ್ಯ  ಅವರನ್ನು ಕಾಲೆಳೆಯುತ್ತಿದ್ದರು. ಅದರಲ್ಲೂ ಜೋಡಿ ಟಾಸ್ಕ್‌ನಲ್ಲಿ ಇಬ್ಬರ ಆಟ ಜನರಿಗೆ ಬಹಳ ಇಷ್ಟವಾಗಿತ್ತು. ಇದನ್ನೂ ಓದಿ: ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ

ಬಿಗ್‌ಬಾಸ್‌ನ ಕೊನೆಯವರೆಗೂ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಟ್ಟಿರಲಿಲ್ಲ. ಗಿಲ್ಲಿ ನಾಯಕನಾಗಿದ್ದಾಗ ರಕ್ಷಿತಾ ಮೂರು ಬಾರಿ ನಾಮಿನೇಷನ್‌ ಪ್ರಕ್ರಿಯೆಗೆ ಒಳಪಡಿಸಿದಾಗ ಕಾವ್ಯ ಅವರನ್ನು  ಸೇವ್‌ ಮಾಡಿದ್ದರು.

ಗಿಲ್ಲಿ ಪ್ರಶಸ್ತಿ ಗೆದ್ದ ಬಳಿಕ ವೇದಿಕೆಯಲ್ಲಿ ನನಗೆ ಕಾವ್ಯ, ರಕ್ಷಿತಾ, ರಘು ಬಹಳ ಪ್ರೋತ್ಸಾಹ ಮಾಡಿದ್ದರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.

Share This Article