ರಾಜಕಾರಣಿಗಳು ಕಾಲಿಗೆ ಬಿದ್ರೂ ಮತ ಹಾಕಲ್ಲ, ಕೋಟ್ಯಂತರ ಜನ ವೋಟ್ ಮಾಡಿ ಗಿಲ್ಲಿಯನ್ನು ಗೆಲ್ಲಿಸಿದ್ದಾರೆ: ಹನುಮಂತ

1 Min Read

ಹಾವೇರಿ: ರಾಜಕಾರಣಿಗಳು ಕಾಲುಬಿದ್ರೂ ಜನರು ಮತ ಹಾಕಲ್ಲ, ಆದರೆ ಕೋಟ್ಯಂತರ ಜನ ವೋಟ್ ಮಾಡಿ ಗಿಲ್ಲಿಯನ್ನು ಗೆಲ್ಲಿಸಿದ್ದಾರೆ, ಒಳ್ಳೆಯದಾಗಲಿ ಎಂದು ಬಿಗ್‌ಬಾಸ್ 11ರ ವಿನ್ನರ್ ಹನುಮಂತ (Bigg Boss 11 Winner) ಶುಭಹಾರೈಸಿದ್ದಾರೆ.

ಹಾವೇರಿ (Haveri) ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರುಬಡ್ನಿಯಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು ಗಿಲ್ಲಿ ನಟ ಗೆದ್ದಿದ್ದು ತುಂಬಾ ಸಂತೋಷವಾಗಿದೆ. ಅವರೇ ಗೆಲ್ಲುತ್ತಾರೆ ಅಂತಾ ನಾನು ಹೇಳಿದ್ದೆ. ಬಿಗಬಾಸ್‌ನಲ್ಲಿ ಯಾವುದೇ ತಾರತಮ್ಯ ಮಾಡಲ್ಲ. ಹೆಚ್ಚು ವೋಟ್ ಬಂದವರನ್ನ ಗೆಲ್ಲಿಸುತ್ತಾರೆ. ಯಾವುದೇ ತಾರತಮ್ಯ ಮಾಡೋದಿಲ್ಲ. ರಾಜಕಾರಣಗಳು ಕಾಲುಬಿದ್ದರೂ ಮತ ಹಾಕಲ್ಲ. ಕರುನಾಡಿನ ಕೋಟ್ಯಂತರ ಜನರು ವೋಟ್ ಹಾಕಿ, ಗೆಲ್ಲಿಸಿದ್ದಾರೆ. ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನೂ ಓದಿ: ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌

ಬಿಗ್‌ಬಾಸ್‌ನಲ್ಲಿ ಸುದೀಪ್ ಸರ್ ಇದ್ದರೆ ಚೆಂದ. ಸುದೀಪ್ ಸರ್ ಇದ್ದರೆ ಶೋ ನೋಡಲು ಚೆಂದ. ಗಿಲ್ಲಿನಟ ಐದಾರೂ ಶೋನಲ್ಲಿ ಭಾಗವಹಿಸಿದ್ದರು, ನಾನು ಸಹ ವಿನ್ನರ್ ಆಗಿರಲಿಲ್ಲ. ಈಗ ಗಿಲ್ಲಿ ಅಣ್ಣಾ ವಿನ್ನರ್ ಆಗಿದ್ದಾರೆ. ನಾನು ವಿನ್ನರ್ ಆಗಿದ್ದೆ. ಅಲ್ಲಿ ತನಕ ಹೋಗಿ ಗೆಲವು ಸಾಧಿಸಿದ್ದಾರೆ. ಗಿಲ್ಲಿಯವರ ಡೈಲಾಗ್ ಬಹಳಷ್ಟು ವೈರಲ್ ಆಗಿವೆ. ರಕ್ಷಿತಾ ಕೂಡ ಕನ್ನಡ ಸರಿಯಾಗಿ ಮಾತನಾಡಲು ಬರಲಿಲ್ಲ ಅಂದರೂ, ಚೆನ್ನಾಗಿ ಆಟವಾಡಿ ರನ್ನರ್ ಆಗಿದ್ದಾಳೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

Share This Article