ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆದ್ರೆ ಅರ್ಧ ಗಡ್ಡ, ಮೀಸೆ ತೆಗೆಯುತ್ತೇನೆ ಅಂತ ಚಾಲೆಂಜ್‌ – ನುಡಿದಂತೆ ನಡೆದ ವ್ಯಕ್ತಿ

1 Min Read

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ (Bigg Boss) ಗಿಲ್ಲಿ ನಟ ವಿನ್ನರ್‌ (Gilli Nata) ಆದರೆ ಅರ್ಧ ಗಡ್ಡ ಮತ್ತು ಮೀಸೆ ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದ ವ್ಯಕ್ತಿಯೊಬ್ಬರು ನುಡಿದಂತೆ ನಡೆದುಕೊಂಡಿದ್ದಾರೆ.

ಅಬ್ದುಲ್‌ ರಜಾಕ್‌ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌

 

View this post on Instagram

 

A post shared by Abdul Razak (@amb_amb_bagawan)

ಒಂದುವೇಳೆ ಗಿಲ್ಲಿ ಬಿಗ್‌ ಬಾಸ್‌ನಲ್ಲಿ ವಿನ್ನರ್‌ ಆದ್ರೆ ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದೆ. ಅವರು ಗೆದ್ದಿದ್ದಾರೆ. ಗಿಲ್ಲಿನ ಫ್ಯಾನ್ಸ್‌ ಗೆಲ್ಲಿಸಿದ್ದಾರೆ. ಅದಕ್ಕಾಗಿ ಗಡ್ಡ, ಮೀಸೆ ತೆಗೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 12ರ ವಿಜೇತರಾಗಿ ಗಿಲ್ಲಿ ನಟರಾಜ್‌ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಹಾಗೂ ಅಶ್ವಿನಿ ಗೌಡ 2ನೇ ರನ್ನರ್‌ ಅಪ್‌ ಆಗಿದ್ದಾರೆ. ಗಿಲ್ಲಿ ನಟನಿಗೆ 50 ಲಕ್ಷ ರೂ., ಕಾರು ಹಾಗೂ ಸುದೀಪ್‌ ಅವರ ಕಡೆಯಿಂದ 10 ಲಕ್ಷ ರೂ. ಬಹುಮಾನ ಸಿಕ್ಕಿದೆ. ಇದನ್ನೂ ಓದಿ: `ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು

ಗಿಲ್ಲಿ ವಿನ್‌ ಆಗ್ತಿದ್ದಂತೆ ತವರಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಜನರು ಮತ್ತು ಅಭಿಮಾನಿಗಳು ವಿನ್ನರ್‌ಗೆ ಅದ್ಧೂರಿ ಸ್ವಾಗತ ಕೋರಲು ತವರು ಮಳವಳ್ಳಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Share This Article