ಟ್ರೋಫಿ ಸಿಕ್ಕಿಲ್ಲ ಅಷ್ಟೇ.. ನನಗೆ ಎಲ್ಲ ಸಿಕ್ಕಿದೆ, ನಾನೇ ವಿನ್ನರ್: ರಕ್ಷಿತಾ ಶೆಟ್ಟಿ

1 Min Read

ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ (Rakshita Shetty) ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ಟ್ರೋಫಿ ಸಿಕ್ಕಿಲ್ಲ ಅಷ್ಟೇ.. ನನಗೆ ಎಲ್ಲವೂ ಸಿಕ್ಕಿದೆ, ನಾನೇ ವಿನ್ನರ್ ಎಂದು ಖುಷಿಪಟ್ಟಿದ್ದಾರೆ.

`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾನಂತೂ ಏನೂ ಅನ್ಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ. ಯಾವ ಸ್ಥಾನ ಅನ್ನೋದು ಮ್ಯಾಟರ್ ಆಗಲ್ಲ, ನಾನು ಇಲ್ಲಿವರೆಗೂ ಬಂದಿದೀನಿ, ಟ್ರೋಫಿ ಒಂದು ಸಿಕ್ಕಿಲ್ಲ ಅಷ್ಟೇ, ಜನರು ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದ್ದಾರೆ. ನಾನೇ ವಿನ್ನರ್ ಅಲ್ವಾ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌

ಕೆಲವು ಭಾವನೆಗಳನ್ನು ತೋರ್ಪಡಿಸೋಕೆ ಆಗಲ್ಲ ಹಾಗೂ ಪದಗಳಿಂದ ವರ್ಣಿಸೋಕೆ ಆಗಲ್ಲ. ಗಿಲ್ಲಿ ಗೆದ್ದಿದ್ದು, ತುಂಬಾ ಖುಷಿಯಿದೆ. ಆಲ್ ದಿ ಬೆಸ್ಟ್, ಖುಷಿಯಾಗಿರಿ. ನನಗೆ ಕೆಲ ದಿನಗಳ ಹಿಂದೆಯಷ್ಟೇ ಕನಸು ಬಿದ್ದಿತ್ತು. ಒಂದು ಕಡೆ ನಾನು ಹಾಗೂ ಇನ್ನೊಂದು ಕಡೆ ಗಿಲ್ಲಿ ಅವರಿದ್ದರು. ನಾನಾ? ಅವರಾ? ಎಂಬ ಪ್ರಶ್ನೆಯಿತ್ತು. ಅದರಂತೆಯೇ ಆಗಿದೆ ಎಂದು ಹೇಳಿದ್ದಾರೆ.

ಬರೀ ಕರಾವಳಿ ಜನ ಅಷ್ಟೇ ಅಲ್ಲ.. ಇಡೀ ಕರ್ನಾಟಕ ಜನ ವೋಟ್ ಮಾಡಿದ್ದಾರೆ. ಅವರ ಪ್ರೀತಿಯಿಂದಲೇ ನಾನು ಇಲ್ಲಿವರೆಗೂ ಬಂದಿದ್ದೀನಿ. ನಾನು ವ್ಲಾಗಿಂಗ್ ಮಾಡಿಕೊಂಡು ಮುಂದುವರೀತಿನಿ. ಇನ್ನೂ ಸಿನಿಮಾ ಮಾಡಲ್ಲ. ನನಗೆ ಆಕ್ಟಿಂಗ್ ಮಾಡಲ್ಲ. ಮುಂದಿನದ್ದು ಏನೋ ಯೋಚಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: `ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು

Share This Article