– ಮುಂದೆ ಸಿನಿಮಾ ಮಾಡ್ಕೊಂಡು ಹೋಗ್ತೀನಿ
– ನಂಗೆ ಚಡ್ಡಿ, ಬನಿಯನ್ನೇ ಇಷ್ಟ ಎಂದ ಗಿಲ್ಲಿ ನಟ
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರ (Bigg Boss) ವಿಜೇತರಾಗಿ ಗಿಲ್ಲಿ ನಟ (Gilli Nata) ಹೊರಹೊಮ್ಮಿದ್ದಾರೆ. ತಮ್ಮ ಗೆಲುವು ಮತ್ತು ಮುಂದಿನ ನಡೆ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ.
ತುಂಬಾ ಖುಷಿ ಆಯ್ತು ನನಗೆ. ನಂಬೋಕೆ ಆಗ್ತಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ನಿಜನಾ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: `ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು
ನನಗೆ ಈಗಲೂ ನಂಬೋದಕ್ಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅಂತ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡಿಕೊಳ್ತಿದ್ದೀನಿ. ನಾನ್ ದೊಡ್ಡಮ್ಮ.. ದೊಡ್ಡಮ್ಮ ದ್ವಾಸೆ ಕೊಡು.. ಹಾಡನ್ನ ಸ್ಕೂಲ್‌ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು ಎಂದು ಖುಷಿ ವ್ಯಕ್ತಪಡಿಸಿದರು.
ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್ ಆಗೋಯ್ತು. ನಾವು 6 ಜನ ಫೈನಲಿಸ್ಟ್ ಇದ್ವಲ್ಲ. ನಮಗೆ ಎಷ್ಟು ಟೆನ್ಷನ್ ಆಗ್ತಿತ್ತು. ಟಾಪ್ 6ನಲ್ಲಿ ಇರೋರಲ್ಲಿ ಯಾರಾದರು ಒಬ್ಬರು ನನ್ನ ಪಕ್ಕ ನಿಲ್ತಾರೆ ಅಂತ ಮನಸ್ಸಿಗೆ ಅನ್ನಿಸಿತ್ತು. ಆದರೆ, ಊಹೆ ಮಾಡೋಕು ಆಗ್ತಿರಲಿಲ್ಲ ಏನಾಗುತ್ತೆ ಅಂತ ಎಂದು ಗೆಲುವಿನ ಕ್ಷಣವನ್ನು ನೆನೆದರು. ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿ, ರನ್ನರ್ ರಕ್ಷಿತಾ, ಅಶ್ವಿನಿ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
ಚಡ್ಡಿ, ಬನಿಯನ್ನೇ ನಂಗಿಷ್ಟ. ಬಿಗ್ ಬಾಸ್ ಮನೆಗೆ ಹೋದಾಗ ನಾನು ಶರ್ಟು-ಪ್ಯಾಂಟು ಹಾಕೊಂಡು ಕುತ್ಕೊಳ್ತಿದ್ದೆ. ಯಾಕೋ ಕಷ್ಟ ಅನ್ಸೋದು. ಆಮೇಲೆ ಆಗಲ್ಲ ಇದು ಅಂತ ಬಿಟ್ಬಿಟ್ಟೆ ಎಂದು ದೊಡ್ಮನೆಯಲ್ಲಿ ಚಡ್ಡಿ-ಬನಿಯನ್ ಹಾಕ್ತಿದ್ದ ಬಗ್ಗೆ ಗಿಲ್ಲಿ ಕ್ಲ್ಯಾರಿಟಿ ಕೊಟ್ಟರು.
ಡೆವಿಲ್ ಸಿನಿಮಾದಲ್ಲಿ ನನ್ನ ನೋಡಿ ಜನ ಇಷ್ಟ ಪಟ್ರಂತೆ ಖುಷಿ ಆಯ್ತು. ರಿಲೀಸ್ ಆಯ್ತು ಅಂತಾನೂ ಗೊತ್ತಾಗಿಲ್ಲ. ಚೈತ್ರಾ ಬಂದಿದ್ರಲ್ಲ ಅವರು, ನಿನ್ನ ನೋಡ್ದೆ ಕಣೋ ಸಿನಿಮಾದಲ್ಲಿ ಅಂದ್ರು. ಯಾವ್ ಸಿನಿಮಾ ಅನ್ಕೊಂತಿದ್ದೆ. ದರ್ಶನ್ ಸರ್ ಸಿನಿಮಾ. ದರ್ಶನ್ ಅಣ್ಣನ ಜೊತೆ ಮೊದಲ ಸಿನಿಮಾ ಮಾಡಿದ್ದು ಖುಷಿ ಆಯ್ತು. ಮುಂದೆ ಹೀಗೇ ಸಿನಿಮಾ ಮಾಡ್ಕೊಂಡು ಹೋಗ್ತೀನಿ ಎಂದು ತಿಳಿಸಿದರು. ಇದನ್ನೂ ಓದಿ: BBK Season 12 Winner | ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ


