`ಧಮ್ಕಿʼ ರಾಜೀವ್‌ ಬಂಧಿಸದಂತೆ ಡಿಕೆಶಿ, ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ – ಶಾಸಕ ರವಿಕುಮಾರ್

1 Min Read

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತ ಗೌಡ ಹಾಗೂ ತನ್ನ ವಿರುದ್ಧ ನಿಂದನಾತ್ಮಕ ಪದ ಬಳಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಂಧಿಸಬೇಕು ಎಂದು ಶಿಡ್ಲಘಟ್ಟ ಶಾಸಕ ಬಿ.ಎನ್ ರವಿಕುಮಾರ್ (BN Ravikumar) ಒತ್ತಾಯಿಸಿದ್ದಾರೆ.

shidlaghatta City Municipal Council Commissioner Amrutha Gowda receives death threat from Congress Leader Rajeev Gowda 1

ಪ್ರಕರಣ ಸಂಬಂಧ ಮಾತನಾಡಿದ ಶಾಸಕ ರವಿಕುಮಾರ್, ರಾಜೀವ್ ಗೌಡ ಬಂಧನ ಮಾಡದಂತೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸೇರಿದಂತೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ರಾಜೀವ್ ಗೌಡ ಬೆನ್ನಿಗೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಮುನಿಯಪ್ಪ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪೌರಾಯುಕ್ತೆಗೆ ಧಮ್ಕಿ ಕೇಸ್; ನಿರೀಕ್ಷಣಾ ಜಾಮೀನಿಗೆ ರಾಜೀವ್ ಗೌಡ ಅರ್ಜಿ ಸಲ್ಲಿಕೆ

ಸಿಎಂ ಸಹ ರಾಜೀವ್ ಗೌಡನನ್ನ ಬಂಧಿಸುವಂತೆ ಸೂಚನೆ ನೀಡಿದ್ರು. ಆದ್ರೆ ಡಿಕೆ ಶಿವಕುಮಾರ್ ಹಾಗೂ ಮುನಿಯಪ್ಪ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ರಾಜೀವ್ ಗೌಡ ನಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಗಿಡ ಅಧಿಕಾರಿಯ ಬಗ್ಗೆ ಮಾತನಾಡಿರುವುದು. ನನಗೆ ಬಹಳಷ್ಟು ನೋವು ತಂದಿದೆ. ನನಗೆ ಮತ ಹಾಕಿರುವ ಮತದಾರರಿಗೆ ರಾಜೀವ್ ಗೌಡ ಮಾಡಿರುವ ಅವಮಾನ. ಈ ಕೂಡಲೇ ರಾಜೀವ್ ಗೌಡನನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಫ್ಲೆಕ್ಸ್‌ ತೆರವು ವಿಚಾರಕ್ಕೆ ಪೌರಾಯುಕ್ತೆಗೆ ಧಮ್ಕಿ; ರಾಜೀವ್‌ ಗೌಡಗೆ ಕೆಪಿಸಿಸಿ ನೋಟಿಸ್‌ ಜಾರಿ

Share This Article