ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ IPL ಆಡೋದಕ್ಕೆ ಷರತ್ತುಬದ್ಧ ಅನುಮತಿ – ಪರಮೇಶ್ವರ್

2 Min Read

ಬೆಂಗಳೂರು: ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ ಐಪಿಎಲ್ (IPL) ಆಡೋದಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದೇವೆ ಎಂದು ಗೃಹ ಜಿ.ಪರಮೇಶ್ವರ್ (G Parameshwat) ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಆಡೋದಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿ, ಕುನ್ಹಾ ಸಮಿತಿ ಕೆಲವೊಂದು ಶಿಫಾರಸ್ಸು ಮಾಡಿತ್ತು. ಅದರನ್ವಯ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ಜಿಬಿಎ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ವಿ. ನಾವು ಕುನ್ಹಾ ಅವರ ಶಿಫಾರಸ್ಸು ಕೆಎಸ್‌ಸಿಎಗೆ ಕಳಿಸಿ, ಇದನ್ನ ಸರಿಮಾಡಿ ಎಂದಿದ್ದೆವು. ಬಳಿಕ ಕೆಎಸ್‌ಸಿಎನವರು ಕೂಡ ಮನವಿ ಮಾಡಿ, ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಹೇಳಿದ್ದರು. ಮಾರ್ಚ್ನಲ್ಲಿ ಐಪಿಎಲ್ ಶುರುವಾಗುತ್ತೆ. ಹೀಗಾಗಿ ಅಷ್ಟರಲ್ಲಿ ಶಾರ್ಟ್‌ಟೈಮ್‌ ಕಂಡೀಷನ್ ಪೂರೈಸಬೇಕು, ಅದಕ್ಕೆ ಷರತ್ತುಬದ್ದವಾಗಿ ಅನುಮತಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ; ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ – ಸತೀಶ್ ಜಾರಕಿಹೊಳಿ

ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಕೆಎಸ್‌ಸಿಎ ಭರವಸೆ ಕೊಟ್ಟಿದೆ. ಹೀಗಾಗಿ ಮತ್ತೊಮ್ಮೆ ಎಲ್ಲವನ್ನು ಪರಿಶೀಲಿಸುತ್ತೇವೆ, ಎಲ್ಲವನ್ನು ಸರಿ ಮಾಡಿದ್ರೆ, ಅನುಮತಿ ಕೊಡ್ತೇವೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದೆ, ಜನರಿಗೆ ನಿರಾಶೆ ಮಾಡಬಾರದು. ಈಗಾಗಲೇ ಕೆಲಸ ಶುರುವಾಗಿದೆ. ಗೇಟ್ ಎಲ್ಲ ಕಿತ್ತಾಕಿದ್ದಾರೆ. ದಾರಿಯಲ್ಲಿ ಬರೋವಾಗ ನೋಡಿದ್ದೇನೆ ಎಂದಿದ್ದಾರೆ.

ರಾಜೀವ್ ಗೌಡ ಅರೆಸ್ಟ್ ಆಗದ ವಿಚಾರವಾಗಿ ಮಾತನಾಡಿ, ನಾವು ಟೀಮ್ ರಚಿಸಿ ಹಿಡಿದುಕೊಂಡು ಬರಬೇಕು ಎಂದು ಸೂಚನೆ ನೀಡಿದ್ದೇವೆ. ಸಿಎಂ ಕೂಡ ಹೇಳಿದ್ದಾರೆ. ಇನ್ನೂ ರಾಜ್ಯದಲ್ಲಿ ಡ್ರಗ್ಸ್ ಹೆಚ್ಚಾಗಿರೋ ಸಂಬಂಧ ಸಿಎಂ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ, ಅದು ಒಳ್ಳೆಯದು. ಸಿಎಂ ಕಡೆಯಿಂದ ಬಂದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಎಲ್ಲಾ ಚರ್ಚೆ ಮಾಡಿ, ನಾನು ಕಠಿಣವಾಗಿಯೇ ಹೇಳಿದ್ದೇನೆ. ರಾಜ್ಯದ ಪೊಲೀಸರು ಎಲ್ಲ ಪೊಲೀಸರಿಗಿಂತ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹಾಗಂತ ಸಮಾಧಾನವಾಗಿ ಇರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ ವಿಚಾರವಾಗಿ, ಹಿಂದೇನೂ ಆ ರೀತಿಯ ಹೇಳಿಕೆ ವಿರೋಧ ಪಕ್ಷದಿಂದ ಬಂದಿತ್ತು. ಈಗ ದೂರು ಬಂದಿರೋದನ್ನ ಗಮನಿಸಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ; ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ – ಕೇಸ್‌ ದಾಖಲು

Share This Article