ದಾವಣಗೆರೆ: ಜನ ಅವರ ಅಭಿಮಾನಕ್ಕಾಗಿ ಮುಂದಿನ ಸಿಎಂ ಅಂತಾ ಘೋಷಣೆ ಕೂಗ್ತಾರೆ, ಆದರೆ ಅದು ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ಅವರ ಅಭಿಮಾನಕ್ಕಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತಾ ಘೋಷಣೆ ಕೂಗ್ತಾರೆ. ಅದು ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ಅಂತಾ ಹೇಳಿದ್ದೇವೆ. ಜನ ನಮ್ಮ ಮೇಲಿನ ಅಭಿಮಾನಕ್ಕೆ ಈ ರೀತಿ ಘೋಷಣೆ ಕೂಗ್ತಾರೆ. ಈಗ ಮಾತ್ರ ನಾನು ಸಿಎಂ ಅಂತಾ ಹೇಳಿಲ್ಲ. ಈಗ ಯಾರಾಗುತ್ತಾರೆ ಆಗಲಿ, ನಮ್ಮದು ಮುಂದಿನ ಚುನಾವಣೆಗೆ ಸಿಎಂ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ – ಕೇಸ್ ದಾಖಲು
ಈಗ ಅಸ್ಸಾಂ ಚುನಾವಣೆ ಬಂದಿದೆ. ಜೊತೆಗೆ ಗ್ರೇಟರ್ ಬೆಂಗಳೂರು ಚುನಾವಣೆ ಸಹ ಇದೆ. ಸಿಎಂ ಬದಲಾವಣೆ ಚರ್ಚೆ ನಿಲ್ಲಿಸುವುದು ಸೂಕ್ತ. ಸಿಎಂ ಮತ್ತು ಡಿಸಿಎಂಗೆ ಹತ್ತಾರು ಕೆಲಸ ಇರುತ್ತದೆ. ಹೀಗಾಗ ಆಗಾಗ ದೆಹಲಿಗೆ ಹೋಗುತ್ತಾರೆ. ಏನೇ ಆದ್ರು ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂದಿದ್ದಾರೆ.
ದಾವಣಗೆರೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮತ್ತೆ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಕೈಯಲ್ಲಿ ಹ್ಯಾಂಡ್ ಪೋಸ್ಟರ್ ಹಿಡಿದು ಮುಂದಿನ ಸಿಎಂ ಸಾಹುಕಾರ್ ಜಾರಕಿಹೊಳಿ ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಅಲ್ಲದೇ ಟೀ-ಶರ್ಟ್ ಮೇಲೆ ಫೋಟೋ, ಪೋಸ್ಟರ್ನಲ್ಲಿ ಪೋಟೋ ಹಾಕಿ, ಸತೀಶ್ ಜಾರಕಿಹೊಳಿ ಎದುರೇ ಮುಂದಿನ ಸಿಎಂ ಎಂದಿದ್ದಾರೆ.ಇದನ್ನೂ ಓದಿ: ಮುಂಬೈನಲ್ಲಿ ಮತ್ತೆ ರೆಸಾರ್ಟ್ ರಾಜಕೀಯ – ಶಿಂಧೆ ಸೇನಾ ಕಾರ್ಪೊರೇಟರ್ಗಳು ಫೈವ್ ಸ್ಟಾರ್ ಹೋಟೆಲ್ಗೆ ಸ್ಥಳಾಂತರ

