Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?

2 Min Read

– ನೆಚ್ಚಿನ ಸ್ಪರ್ಧಿ ಗೆಲುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ (Bigg Boss Kannada 12 Finale) ಗ್ರ್ಯಾಂಡ್‌ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಎಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಾನಾ ರೀತಿಯಲ್ಲಿ ತಮ್ಮ ಫೇವರಿಟ್‌ ಸ್ಪರ್ಧಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲೆಲ್ಲೂ ಗಿಲ್ಲಿ ನಟನ (Gilli Nata) ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ಹಳ್ಳಿಹೈದನ ಕಾಮಿಡಿಗೆ ಮನಸೋತಿರುವ ಜನತೆ ಗಿಲ್ಲಿ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ಗಿಲ್ಲಿ ಭಾವಚಿತ್ರಕ್ಕೆ ದೃಷ್ಟಿ ತೆಗೆದು ಇಡುಗಾಯಿ ಒಡೆದಿದ್ದಾರೆ. ಕೆಲ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗಿಲ್ಲಿ ಟ್ಯಾಟೂ ಕೂಡ ಹಾಕಿಸಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಲ್ಲಿ ಟೀ-ಕಾಫಿ, ತಿಂಡಿ, ತಿನಿಸುಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಿ ಗಿಲ್ಲಿ ಪರವಾಗಿ ವೋಟ್‌ ಮಾಡಿಸುತ್ತಿದ್ದಾರೆ. ಇಂತಹ ಅನೇಕ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಬಿಗ್‌ಬಾಸ್ ವಿನ್ನರ್‌ಗೆ 370000000 ವೋಟ್ – ಗೆಲ್ಲೋದ್ಯಾರು?

ಮತ್ತೊಂದೆಡೆ ಬೆಂಗಳೂರಿನ ಅತ್ತಿಗುಪ್ಪೆಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅಶ್ವಿನಿ ಗೌಡ (Ashwini Gowda) ಗೆಲುವಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಿ, 100 ಇಡುಗಾಯಿ ಒಡೆಯಲಾಗಿದೆ. ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಬೆಂಬಲಿಗರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ.

ಹೊರಗಡೆ ಪ್ರಚಾರದಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿಗೌಡ ನಡುವೆ ತುಂಬಾ ಪೈಪೋಟಿ ಇದ್ದು, ನೆಚ್ಚಿನ ಸ್ಪರ್ಧಿಗಳನ್ನ ಗೆಲ್ಲಿಸೋಕೆ ಅಭಿಮಾನಿಗಳು, ಬೆಂಬಲಿಗರು ಹಲವು ದೇಗುಲಗಳಲ್ಲಿ ಪೂಜೆ ಸಲ್ಲಿಸ್ತಿದ್ದಾರೆ. ಅಶ್ವಿನಿಗೌಡ ಗೆಲುವಿಗಾಗಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಯ ಪದಾಧಿಕಾರಿಗಳು, ಬೆಂಬಲಿಗರು ದೇಗುಲಗಳಲ್ಲಿ ಪೂಜೆ ಮಾಡಿಸಿ, ಜನರಿಗೂ ವೋಟ್ ಮಾಡುವಂತೆ ಮನವಿ ಮಾಡ್ತಿದ್ದಾರೆ. ಜನ ಕೂಡ ಅಶ್ವಿನಿ ಪರ ಒಲವು ತೋರಿಸ್ತಿದ್ದಾರೆ. ಕರಾವಳಿ ಬೆಡಗಿ ರಕ್ಷಿತಾಗೆ ಕೂಡ ಅಪಾರ ಜನಬೆಂಬಲ ವ್ಯಕ್ತವಾಗಿದೆ. ರಘು, ಧನುಷ್‌, ಕಾವ್ಯಗೆ ಕೂಡ ರಾಜಕಾರಣಿಗಳು, ಸೆಲೆಬ್ರಿಟಿಗಳು, ಫ್ಯಾನ್ಸ್‌ ಬೆಂಬಲ ವ್ಯಕ್ತಪಡಿಸಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: BBK 12 | ಅಶ್ವಿನಿ ಗೌಡ ಪರ ನಾರಾಯಣ ಗೌಡ, ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಬ್ಯಾಟಿಂಗ್‌

ಗಿಲ್ಲಿ ಮತ್ತು ಅಶ್ವಿನಿ ನಡುವೆ ಟೈಟ್ ಫೈಟ್ ಇದ್ದು, ರಾಜಕೀಯ ಮುಖಂಡರು ಗಿಲ್ಲಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಸೆಲೆಬ್ರಿಟಿಗಳು ಅಶ್ವಿನಿ ಪರ ನಿಂತಿದ್ದು, ವೋಟ್ ಮಾಡುವಂತೆ ಮನವಿ ಮಾಡ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕ್ರೇಜ್ ಗಿಲ್ಲಿ, ಅಶ್ವಿನಿಯಿಂದ ಶುರುವಾಗಿದ್ದು, ಅಂತಿಮವಾಗಿ ಯಾರು ಅಧಿಪತಿಯಾಗ್ತಾರೆ ಅನ್ನೋ ಕುತೂಹಲಕ್ಕೆ ಕೆಲವೇ ಘಂಟೆಗಳಲ್ಲಿ ತೆರೆ ಬೀಳಲಿದೆ.

Share This Article