BBK 12 | ಅಶ್ವಿನಿ ಗೌಡ ಪರ ನಾರಾಯಣ ಗೌಡ, ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಬ್ಯಾಟಿಂಗ್‌

2 Min Read

– ಇನ್ನೊಬ್ಬರ ಕಾಲು ಎಳೆದು ನಗಿಸಿಕೊಂಡಿರೋ ವ್ಯಕ್ತಿಯನ್ನ ಬೆಂಬಲಿಸಬೇಕಾ? – ನಾರಾಯಣ ಗೌಡ

ಕನ್ನಡದ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 (BBK 12), ಈ ಬಾರಿ ಪ್ರತಿಷ್ಠೆಯ ಕಣವಾಗಿ ಧೂಳೆಬ್ಬಿಸುತ್ತಿದೆ. ಸೋಷಿಯಲ್ ಮೀಡಿಯಾ ತುಂಬಾ ದೊಡ್ಮನೆಯದ್ದೇ ಹವಾ.. ಬಿಗ್‌ ಬಾಸ್ ಫೈನಲ್ ಆಟಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಇಷ್ಟದ ಕಂಟೆಸ್ಟೆಂಟ್‌ಗಳ ಪರ ಸಖತ್ ವೋಟಿಂಗ್ ಕ್ರೇಜ್ ಶುರುವಾಗಿದೆ. ರಾಜಕೀಯ ನಾಯಕರಲ್ಲದೇ, ವಿವಿಧ ಸಂಘಟನೆಯ ಪ್ರಮುಖರು ತಮ್ಮಿಷ್ಟದ ಸ್ಪರ್ಧಿಗಳ ಪರ ಪ್ರಚಾರ ಶುರು ಮಾಡಿದ್ದಾರೆ.

ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲೂ ಬಿಗ್‌ ಬಾಸ್‌ ಪ್ರತಿಷ್ಠೆಯ ಫೈಟ್‌ ಜೋರಾಗಿದೆ. ನಾರಾಯಣ ಗೌಡರು ಅಶ್ವಿನಿ ಗೌಡ (Aswini Gowda) ಪರ ಬ್ಯಾಟ್‌ ಬೀಸಿದ್ರೆ, ಪ್ರವೀಣ್‌ ಶೆಟ್ಟಿ ಅವರು ಗಿಲ್ಲಿ ನಟನ (Gilli Nata) ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿಗಳ ಪರ ರಾಜಕೀಯ ನಾಯಕರ ಮತಯಾಚನೆ – ಯಾರಿಗೆ ಯಾರ ಬೆಂಬಲ?

ಅಶ್ವಿನಿ ಗೌಡ ತನ್ನ ಶ್ರಮದಿಂದ, ಅನೇಕ ವಿಚಾರಗಳನ್ನ ಸಹಿಸಿಕೊಂಡು ಫೈನಲ್‌ಗೆ ಬಂದು ನಿಂತಿದ್ದಾರೆ. ಬಿಗ್‌ ಬಾಸ್‌ ಫೈನಲ್‌ಗೆ ಬರೋದು ಅಷ್ಟು ಸುಲಭವಲ್ಲ. ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಬಡವರ ನೋವು, ದುಃಖ ದುಮ್ಮಾನಗಳಿಗೆ ಗಟ್ಟಿಯಾಗಿ ನಿಂತಿದ್ದಾರೆ. ಅನೇಕ ಸಂದರ್ಭದಲ್ಲಿ ಕೇಸ್‌ ಹಾಕಿಸಿಕೊಂಡು, ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಎಲ್ಲ ಅನುಭವಗಳಿಂದ ಗಟ್ಟಿಯಾಗಿ ನಿಂತು ಫೈನಲ್‌ ತಲುಪಿದ್ದಾರೆ ಎಂದರು. ಇದನ್ನೂ ಓದಿ: 6 ಮಂದಿಯಲ್ಲಿ ಕಪ್ ಗೆಲ್ಲೋರು ಯಾರು? ಯಾರ ಪರ ಅಭಿಮಾನಿಗಳ ಬಹುಪರಾಕ್?

ಗಿಲ್ಲಿ ಗೆದ್ರೆ ನಾಳೆ ಸಮಾಜಕ್ಕೆ ಏನು ಕೊಡಬಹುದು?
ಗಿಲ್ಲಿ ಗೆದ್ರೆ ನಾಳೆ ಸಮಾಜಕ್ಕೆ ಏನು ಕೊಡಬಹುದು? ಅಶ್ವಿನಿ ಗೌಡ ಗೆದ್ರೆ ಇನ್ನೊಂದಿಷ್ಟು ವರ್ಷ ನನ್ನ ನಾಡು, ನನ್ನ ಸಂಸ್ಕ್ರತಿ ಅಂತಾ ಹೋರಾಟ ಮಾಡ್ತಾಳೆ. ನಾಡು ನುಡಿಗಾಗಿ ಬೀದಿಯಲ್ಲಿ ನಿಂತು 20 ಹೋರಾಟ ಮಾಡೋರನ್ನ ಬೆಂಬಲಿಸಬೇಕು. ಇನ್ನೊಬ್ಬರನ್ನ ಕಾಲು ಎಳೆದುಕೊಂಡು, ನಗಿಸಿಕೊಂಡು ಇರೋ ವ್ಯಕ್ತಿಯನ್ನ ಬೆಂಬಲಿಸಬೇಕಾ? ಕರವೇ ಆಯ್ಕೆ ಹೋರಾಟಗಾರ್ತಿ ಅಶ್ವಿನಿಗೌಡರನ್ನ ಬೆಂಬಲಿಸೋದು ಅಂತಾ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿಲ್ಲ, ಇದಕ್ಕೆ ಕೋಮುವಾದಿ ಮನಸ್ಥಿತಿ ಕಾರಣವಿರಬಹುದು: ಎ.ಆರ್ ರೆಹಮಾನ್

ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಬಿಗ್‌ ಬಾಸ್‌ನಲ್ಲಿ ಗಿಲ್ಲಿ ಎಲ್ಲರನ್ನೂ ನಗಿಸುವಂತಹ ಹುಡುಗ. ಎಂಥಾ ಸಂದರ್ಭದಲ್ಲೂ ಯಾರನ್ನ ಬೇಕಾದ್ರೂ ನಗಿಸ್ತಾನೆ. ದ್ವೇಷ ಮಾಡುವಂತದ್ದು, ವಿರೋಧ ಮಾಡುವಂತದ್ದು ಗಿಲ್ಲಿಗೆ ಗೊತ್ತಿಲ್ಲ ಅನಿಸುತ್ತೆ. ಬಡವರ ಮನೆ ಹುಡುಗ, ಗಿಲ್ಲಿ ಗೆಲ್ಲಬೇಕು. ನಗುವಿನ ಚಕ್ರವರ್ತಿ, ನಗಿಸುವ ಚಕ್ರವರ್ತಿ ಗಿಲ್ಲಿ ಗೆಲ್ಲಬೇಕು ಅನ್ನೋದು ಕನ್ನಡಿಗರ ಆಶಯ. ಅದ್ರಲ್ಲಿ ನನ್ನ ಆಶಯ ಸಹ ಇದಾಗಿದೆ. ಶಿವಣ್ಣ ಸಹ ಗಿಲ್ಲಿ ಗೆಲ್ಲಬೇಕು ಅಂದಿದ್ದಾರೆ. ಕನ್ನಡ ಹೋರಾಟಗಾರರು ಯಾರೇ ಗೆದ್ರು ಒಪ್ಪಿಕೊಳ್ಳಬೇಕು, ಬಣ ಬಣಗಳ ನಡುವೆ ಕಿತ್ತಾಟ ಬೇಡ ಅಂತ ಹೇಳಿದ್ದಾರೆ.

Share This Article