ಬಳ್ಳಾರಿ: ದೇಶ ದ್ರೋಹಿಗಳು ಸತ್ತರೆ ಕಾಂಗ್ರೆಸ್ ಸರ್ಕಾರ (Congress Government) 20 ಲಕ್ಷ ರೂ. ಕೊಡುತ್ತದೆ. ಆದರೆ ಒಬ್ಬ ಹಿಂದೂ (Hindu) ಕೊಲೆಯಾದರೆ ತಿರುಗಿಯೂ ನೋಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಕ್ರೋಶ ಹೊರಹಾಕಿದರು.
ಜನಾರ್ದನ ರೆಡ್ಡಿ (Janardhana Reddy) ಮನೆ ಮುಂದೆ ನಡೆದ ಬ್ಯಾನರ್ ಗಲಭೆ ಖಂಡಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಇದ್ದಾಗ ವಾಲ್ಮೀಕಿ ಜಯಂತಿ ಘೋಷಣೆ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಬಳ್ಳಾರಿಯಲ್ಲಿ ರಾಮುಲು- ರೆಡ್ಡಿ ಅವರು ವಾಲ್ಮೀಕಿ ಪ್ರತಿಮೆ ಮಾಡಿಸಿದರು. ಸಿದ್ದರಾಮಯ್ಯನವರೇ ಕಾಂಗ್ರೆಸ್ ಸರ್ಕಾರದಿಂದ ವಾಲ್ಮಿಕಿ ಸಮುದಾಯಕ್ಕೆ ಕೊಡುಗೆ ಏನು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಗೆ ಅವಮಾನ ಮಾಡಿದರೂ ಸುಮ್ಮನಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮಹಿಳೆಯರ ಜೊತೆ ಪುರುಷರಿಗೂ ಫ್ರೀ ಬಸ್, ಪ್ರತಿಯೊಬ್ಬರಿಗೂ ಸೂರು – AIADMK ಪಂಚ ಗ್ಯಾರಂಟಿ ಘೋಷಣೆ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು-ಸುವ್ಯವಸ್ಥೆ ಖಂಡಿಸಿ, @INCKarnataka ಶಾಸಕರ ಗೂಂಡಾಗಿರಿ ಹಾಗೂ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ವಿರುದ್ಧ ಇಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಈ ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ… pic.twitter.com/YOVdYitqPH
— Vijayendra Yediyurappa (@BYVijayendra) January 17, 2026
ಪಾದಯಾತ್ರೆ ಬಗ್ಗೆ ನಮ್ಮಲ್ಲೇ ನೇತೃತ್ವ ವಹಿಸುವ ಬಗ್ಗೆ ಒಮ್ಮತ ಇಲ್ಲ ಎಂದು ಪತ್ರಿಕೆಯಲ್ಲಿ ಬಂದಿದೆ. ಆದರೆ ನಾವೆಲ್ಲರೂ ಪಾದಯಾತ್ರೆಗೆ ಸಿದ್ದರಿದ್ದೇವೆ. ಕೋರ್ ಕಮೀಟಿಯಲ್ಲಿ ನಾವೆಲ್ಲರೂ ನಿರ್ಧರಿಸಿದ್ದೇವೆ. ನಾಯಕತ್ವ ನಮಗೆ ಮುಖ್ಯ ಅಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ನಾಯಕು ಅನುಮತಿ ಕೊಟ್ಟರೆ ಪಾದಯಾತ್ರೆ ಮಾಡುತ್ತೇವೆ ಎಂದರು.
ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣವನ್ನ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಕೊಡಬೇಕು. ಪ್ರಕರಣದ ರುವಾರಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರನ್ನ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ನಡೆದ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದರು. ಸಮಾವೇಶದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ ರಾಜ್ಯದ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.

