ಡಿವೈಡರ್ ಹಾರಿ ಟಿಪ್ಪರ್‌ಗೆ ಡಿಕ್ಕಿಯಾದ ಬೈಕ್ – ಮೂವರು ವಿದ್ಯಾರ್ಥಿಗಳ ತಲೆ ಛಿದ್ರ

1 Min Read

ಚಿಕ್ಕಬಳ್ಳಾಪುರ: ದೇವನಹಳ್ಳಿ (Devanahalli) ಬಳಿ ಬೈಕ್ (Bike) ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಮೂವರು ವಿದ್ಯಾರ್ಥಿಗಳು (Students) ಸಾವನ್ನಪ್ಪಿದ್ದಾರೆ.

ಮೂರು ವಿದ್ಯಾರ್ಥಿಗಳು ಹುಣಸಮಾರೇನಹಳ್ಳಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೃತದರಲ್ಲಿ ಓರ್ವನನ್ನು ಚಿಕ್ಕಜಾಲ ಮೂಲದ ತೌಸೀಫ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ. ಮೂವರು ವಿದ್ಯಾರ್ಥಿಗಳು ದೇವನಹಳ್ಳಿಯಿಂದ ಬೂದಿಗೆರೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ ಎದುರಿಗೆ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂವರ ಮೃತದೇಹ ಛಿದ್ರಗೊಂಡಿವೆ. ಇದನ್ನೂ ಓದಿ: 30 ರೂಪಾಯಿಗೆ ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಮಾರಾಟ – ಶಿಕ್ಷಕರು, ವಿದ್ಯಾರ್ಥಿಗಳಿಂದಲೇ ಕೃತ್ಯ

ಅಪಘಾತದ ಬಳಿಕ ಟಿಪ್ಪರ್‌ ಚಾಲಕ, ಟಿಪ್ಪರ್‌ ಸಮೇತ (Hit And Run) ಪರಾರಿಯಾಗಿದ್ದಾನೆ. ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಮೃತ ದೇಹಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಇಬ್ಬರು ಸ್ನೇಹಿತೆಯರ ಕಗ್ಗೊಲೆ – ಗೋವಾದಲ್ಲಿ ರಷ್ಯಾ ವ್ಯಕ್ತಿ ಸೆರೆ

Share This Article