ಭರತ್‌ ರೆಡ್ಡಿ ಆಪ್ತನ ಇಬ್ಬರು ಗನ್‌ಮ್ಯಾನ್‌ಗಳು ಅರೆಸ್ಟ್ – ಶನಿವಾರ ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಪವರ್‌ಶೋ

2 Min Read

ಬಳ್ಳಾರಿ: ಬ್ಯಾನರ್ ಗಲಾಟೆ ಸಂಬಂಧ ಶಾಸಕ ನಾರಾ ಭರತ್ ರೆಡ್ಡಿ (Bharath Reddy) ಬಂಧನಕ್ಕೆ ಆಗ್ರಹಿಸಿ ನಾಳೆ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಪಾದಯಾತ್ರೆ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಲ್ಲ. ಪಾದಯಾತ್ರೆಗೆ ನನ್ನ ವೈಯಕ್ತಿಕ ವಿರೋಧ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಸ್ಪಷ್ಟಪಡಿಸಿದ್ದಾರೆ. ಇನ್ನೂ ಬ್ಯಾನರ್ ಸಂಘರ್ಷದಲ್ಲಿ ಈಗಾಗಲೇ ಓರ್ವ ಬಲಿಯಾಗಿದ್ದು ಸದ್ಯ ಬಳ್ಳಾರಿ ಬೂದಿಮುಚ್ಚಿದ ಕೆಂಡದಂತಿದೆ. ಇದೇ ಸನ್ನಿವೇಶದಲ್ಲಿ ಸಮಾವೇಶ ಆಯೋಜನೆ ಮಾಡಿರೋದ್ರಿಂದ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ. ಇದನ್ನೂ ಓದಿ: ಬಳ್ಳಾರಿ ಬ್ಯಾನರ್‌ ಬಡಿದಾಟದ ವಿಡಿಯೋ ಇದ್ದಲ್ಲಿ ಸೆಂಡ್‌ ಮಾಡಿ – ಸಿಐಡಿ ಮನವಿ

ನಗರದ ಎಪಿಎಂಸಿ ಆವರಣದಲ್ಲಿ ಸಮಾವೇಶ ನಡೆಯಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶನಿವಾರ ಸಮಾವೇಶದ ಭದ್ರತೆ ಕುರಿತು ಬಳ್ಳಾರಿ ಎಸ್‌ಪಿ ಸುಮನ್ ಡಿ ಪೆನ್ನೇಕರ್ (Suman D Pennekar) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಗಲಭೆ – ಬಂಧನ ಭೀತಿಯಿಂದ ಬಳ್ಳಾರಿ ತೊರೆದ ಕಾರ್ಯಕರ್ತರು

ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 12 ಡಿಎಆರ್, 17 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಪ್ರತಿಭಟನಾ ರ‍್ಯಾಲಿ ಅಂತಾ ಮನವಿ ಕೊಟ್ಟಿದ್ದಾರೆ. ಆದ್ರೆ ಎಪಿಎಂಸಿಯಲ್ಲಿ ಸಮಾವೇಶಕ್ಕೆ ಅವಕಾಶ ಪಡೆದಿದ್ದಾರೆ ಎಂದು ಎಸ್‌ಪಿ ಸುಮನ್ ಡಿ ಪನ್ನೇಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಶೂಟೌಟ್‌ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌ – ವಿಡಿಯೋನಲ್ಲಿದ್ದ ಬಹುತೇಕರು ಬಳ್ಳಾರಿಯವರೇ ಅಲ್ವಾ?

ಇಬ್ಬರು ಗನ್‌ ಮ್ಯಾನ್‌ಗಳು ಅರೆಸ್ಟ್‌
ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಟೀಂ ತನಿಖೆಯನ್ನ ಚುರುಕುಗೊಳಿಸಿದೆ. ಸಿಐಡಿ ಎಸ್ಪಿ ಹರ್ಷಾ ಪ್ರೀಯಂವದಾ ನೇತೃತ್ವದ ತಂಡದಿಂದ ಸತೀಶ್ ರೆಡ್ಡಿಯ ಮತ್ತಿಬ್ಬರು ಗನ್ ಮ್ಯಾನ್ ಗಳನ್ನ ಇಂದು ಅರೆಸ್ಟ್ ಮಾಡಲಾಗಿದೆ. ಶಾಸಕ ಭರತ್ ರೆಡ್ಡಿ ಜೊತೆಗೆ ಘಟನಾ ಸ್ಥಳಕ್ಕೆ ಬಂದಿದ್ದ ಇಬ್ಬರು ಗನ್ ಮ್ಯಾನ್ ಗಳು ಏರ್‌ ಗನ್ ಓಪನ್ ಮಾಡಿದ್ರು. ಏರ್ ಗನ್ ಓಪನ್ ಮಾಡಿದ್ದ ಹಿನ್ನೆಲೆ ಸತೀಶ್ ರೆಡ್ಡಿಯ ಇಬ್ಬರು ಗನ್‌ ಮ್ಯಾನ್‌ಗಳಾದ ಬಲ್ಜಿತ್ ಸಿಂಗ್ ಹಾಗೂ ಮನ್ವಿಂದರ್ ಸಿಂಗ್ ಎನ್ನುವವರನ್ನ ಬಂಧಿಸಲಾಗಿದೆ. ಫೈರಿಂಗ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಿರುವ ಮಾಹಿತಿ ಇದ್ದು, ಬಳ್ಳಾರಿ ಬ್ರೂಸ್‌ಪೇಟೆ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗ್ತಿದೆ. ಸಿಐಡಿ ಪ್ರಾಥಮಿಕ ವಿಚಾರಣೆ ಬಳಿಕ ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

Share This Article