– 22 ಲಕ್ಷ ಮೌಲ್ಯದ ವಸ್ತುಗಳು ಸೀಜ್
ಕೋಲಾರ: ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು (Milk) ತಯಾರು ಮಾಡುತ್ತಿದ್ದ ಅಡ್ಡೆ ಮೇಲೆ ಕೆಜಿಎಫ್ ಪೊಲೀಸರು ( KGF Police) ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರ್ರ ಮೂಲದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಜಿಎಫ್ ತಾಲೂಕಿನ ಬಳ್ಳಗೆರೆ ಗ್ರಾಮದ ಬಳಿ ಅಕ್ರಮ ಕಲಬೆರಕೆ ಹಾಲು ತಯಾರಿಸುತ್ತಿದ್ದರು. ಬಂಧಿತರಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಉಪಕರಣ ಹಾಗೂ ಕಲಬೆರೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮೋಸ ಮಾಡಿದವ್ರು ಉದ್ಧಾರ ಆಗಲ್ಲ – ಸಮೃದ್ಧಿ ರಾಮ್ ವಿರುದ್ಧ ಪ್ರತಿಭಾ ಶೆಟ್ಟಿ ಗರಂ
ಪಾಮಾಯಲ್, ಮಿಲ್ಕ್ ಪೌಡರ್, ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಪುಷ್ಟಿ ಪೌಡರ್, ಲಡ್ಡು, ಹಾಲಿನ ಕ್ಯಾನ್‍ಗಳು, ಎರಡು ಲಗೇಜ್ ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ. ಪತ್ತೆಯಾದ ವಸ್ತುಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಸಂಬಂಧಿ ಮೇಲೆ ನಿರಂತರ ಅತ್ಯಾಚಾರ – ವೀಡಿಯೊ ಮಾಡಿ ಪೋಸ್ಟ್ ಮಾಡ್ತಿದ್ದ ಕಾಮುಕ ಅರೆಸ್ಟ್

