ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತೆ, ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ ಸತ್ಯನಾಶವಾಗಲಿದೆ – ರಮೇಶ ಜಿಗಜಿಣಗಿ

1 Min Read

ವಿಜಯಪುರ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತಿದೆ. ಅದರಂತೆ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ (Congress) ಇರಲ್ಲ, ಸತ್ಯನಾಶವಾಗಲಿದೆ ಎಂದು  ಸಂಸದ ರಮೇಶ ಜಿಗಜಿಣಗಿ (Ramesh Jigajinagi) ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಂದೊಂದು ದಿನ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡಕಬೇಕಿದೆ. ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತಿದೆ. ಅದರಂತೆ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ, ಸತ್ಯನಾಶವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ನೀರು ಕುಡಿಯಲು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ `ವಾಟರ್ ಬೆಲ್’

ದೇಶದಲ್ಲಿ ನರೇಗಾ ಯೋಜನೆಗೆ ಯಾವುದೇ ಚೌಕಟ್ಟು ಇರಲಿಲ್ಲ. ಈಗ ಜಿರಾಮ್‌ಜಿ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಕೇಂದ್ರ, ರಾಜ್ಯ ಎರಡರ ಸಹಯೋಗದಲ್ಲಿ ಈ ಯೋಜನೆ ನಡೆಯುತ್ತಿದೆ. ಈ ಹಿಂದೆ ಇದಕ್ಕೆ ರಾಜ್ಯ ಸರ್ಕಾರಗಳು ಅನುದಾನ ಕೊಡುತ್ತಿರಲಿಲ್ಲ. ಈಗ 60-40 ಅನುದಾನದ ಪಾಲನ್ನು ಕಡ್ಡಾಯ ಮಾಡಲಾಗಿದೆ. ಅದಕ್ಕೆ ಈ ರೀತಿ ರಾಜ್ಯ ಸರ್ಕಾರ ಕೇಂದ್ರವನ್ನು ದೂರುತ್ತಿದೆ ಎಂದಿದ್ದಾರೆ. ಈ ಹಿಂದೆ ಯೋಜನೆಗೆ ಲೆಕ್ಕಾಚಾರ ಇರುತ್ತಿಲ್ಲ, ಖೊಟ್ಟಿ ಹೆಸರನ್ನು ತೋರಿಸಿ ಅನುದಾನ ದುರ್ಬಳಕೆ ಮಾಡಲಾಗು ತ್ತಿತ್ತು. ಈಗ ಇದಕ್ಕೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

Share This Article