15 ರೂಪಾಯಿಗೆ ಸಿಕ್ತಾರೆ ಗರ್ಲ್‌ ಫ್ರೆಂಡ್‌ – ಆ್ಯಪ್‌ನಲ್ಲಿ ಮಹಿಳೆಯರ ಮಾನಹಾನಿ; ಕೊಡಗಿನ ವಿವಿಧ ಠಾಣೆಗಳಲ್ಲಿ ಕೇಸ್‌!

1 Min Read

ಮಡಿಕೇರಿ: ಖಾಸಗಿ ಕ್ಷಣಗಳ ಬಯಕೆ ಈಡೇರಿಸಿಕೊಳ್ಳಲು, ಸುಂದರ/ಸುಂದರಿಯರ ಜೊತೆ ಹರಟೆ ಹೊಡೆಯಲು ಬಹುತೇಕ ಯುವಜನರಿಂದು ಡೇಟಿಂಗ್‌ ಆ್ಯಪ್‌ ಹಾಗೂ ಸೋಷಿಯಲ್‌ ಮೀಡಿಯಾಗಳ ಮೊರೆ ಹೋಗ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ವಂಚಕರು ಹಣ ಕಸಿದು ಎಸ್ಕೇಪ್‌ ಆಗ್ತಿದ್ದಾರೆ. ಜೊತೆಗೆ ಹೆಣ್ಣುಮಕ್ಕಳ ಮಾನಹಾನಿ ಮಾಡುತ್ತಿದ್ದಾರೆ. ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಅಪಪ್ರಚಾರ ಮಾಡ್ತಿರೋದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಹೌದು. ʻಕೊಡಗಿನಲ್ಲಿ ಹೆಣ್ಣು ಮಕ್ಕಳೊಂದಿಗೆ ಚಾಟ್ ಮಾಡಬೇಕಾ..? ಈ ಆ್ಯಪ್‌ನಲ್ಲಿ 2,000 ಮಹಿಳೆಯರು ಆ್ಯಕ್ಟೀವ್‌ ಆಗಿದ್ದಾರೆ. ಕೇವಲ 15 ರೂಪಾಯಿ ಕೊಟ್ಟು ವಿಡಿಯೋ ಕರೆ ಮಾಡಿʼ ಎಂಬ AI ವಿಡಿಯೋವೊಂದು ವೈರಲ್‌ ಆಗ್ತಿದೆ. ಈ ಸಂಬಂಧ ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಇದನ್ನೂ ಓದಿ: ಅವಾಚ್ಯ ಶಬ್ಧಗಳಿಂದ ನಿಂದನೆ, ಕೊಲೆ ಬೆದರಿಕೆ – ʻಕೈʼ ಮುಖಂಡನ ವಿರುದ್ಧ ಪೌರಾಯುಕ್ತೆ ಅಮೃತಗೌಡ ದೂರು

ʻHumsafarʼ ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ಕಳೆದ 4-5‌ ದಿನಗಳಿಂದ AI ವಿಡಿಯೋವೊಂದನ್ನ ಹರಿಬಿಡಲಾಹಿದೆ. ʻzari app ಮಡಿಕೇರಿಯ 2,000 ಹುಡುಗಿಯರು ಆಕ್ಟೀವ್‌ ಇದ್ದಾರೆ. ಸೋಮವಾರಪೇಟೆಯಾಗಲಿ, ವಿರಾಜಪೇಟೆಯಾಗಲಿ, ಮಡಿಕೇರಿಯಾಗಲಿ, ಕುಶಾಲನಗರವಾಗಲಿ ನಿಮಗೆ ಯಾವ ಏರಿಯಾದ ಗರ್ಲ್‌ಫ್ರೆಂಡ್‌ ಬೇಕು zari app ನಲ್ಲಿ 15 ರೂಪಾಯಿಗೆ ಸಿಕ್ತಾರೆ. ಬೇಕಾದ್ರೆ 15 ರೂಪಾಯಿಗೆ ನೀವೇ ಟ್ರೈ ಮಾಡಿ ನೋಡಿʼ ಎಂಬ ವಿಡಿಯೋ ಹರಿಬಿಡಲಾಗಿದೆ.

ಇದು ಕೊಡಗು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜಕ್ಕೆ ಮಾರಕವಾಗುವ ಇಂತಹ ಆ್ಯಪ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ. ವಿವಿಧ ಕನ್ನಡ ಪರ ಸಂಘಟನೆಗಳು, ಕೊಡಗಿನ ಸಂಘಟನೆಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿವೆ. ಇದನ್ನೂ ಓದಿ:  219ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಡಿಸಿಎಂ – ಹೂವಲ್ಲೇ ತೇಜಸ್ವಿ ವಿಸ್ಮಯ ಲೋಕ ಸೃಷ್ಟಿ

ಈ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಎಸ್ಪಿ ಬಿಂದು ಮಣಿ, ಈಗಾಗಲೇ ಈ zari app ನ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಸೈಬರ್‌ ಅಪರಾಧದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಕೂಡ ನಡೆಸಲಾಗುತ್ತಿದ್ದು, ಜನರು ಮೋಸದಂತೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ.

Share This Article