ನವದೆಹಲಿ/ಟೆಹ್ರಾನ್: ಇರಾನ್ನಲ್ಲಿ ದಿನೇ ದಿನೇ ಘನಘೋರ ದುರಂತಗಳು ಸಂಭವಿಸ್ತಿದ್ದು, ಸರ್ವಾಧಿಕಾರಿ ಖಮೇನಿ (Ali khamenei) ವಿರುದ್ಧ ಆಕ್ರೋಶ ತೀವ್ರಗೊಂಡಿದೆ.
ಈ ಮಧ್ಯೆ, ಖಮೇನಿಗೆ ಬೆಂಬಲ ಸೂಚಿಸಿ ಕಾರ್ಗಿಲ್ನಲ್ಲಿ ಮುಸ್ಲಿಮರು (Kargil Muslims) ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಭಾರತ-ಇರಾನ್ ರಾಷ್ಟ್ರಧ್ವಜ ಪ್ರದರ್ಶಿಸಿ ನಾವು ಸಹೋದರರು ಅಂದಿದ್ದಾರೆ. ಅಲ್ಲದೇ, ಟ್ರಂಪ್ಗೆ (Donald Trump) ಅಣಕು ಶವಪೆಟ್ಟಿಗೆ ಇಟ್ಟು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯರಿಗೆ ಎಚ್ಚರಿಕೆ
ಇನ್ನೂ ಇರಾನ್ ಮೇಲೆ ಅಮೆರಿಕ ಸಮರ ಸಾರುವ ಸಾಧ್ಯತೆಗಳು ಹೆಚ್ಚಾಗಿರೋ ಬೆನ್ನಲ್ಲೇ, ಇರಾನ್ನಲ್ಲಿರುವ ಭಾರತೀಯರಿಗೆ ಸಂದೇಶ ರವಾನಿಸಿದೆ. ತಕ್ಷಣವೇ ಇರಾನ್ ತೊರೆಯುವಂತೆ ಸೂಚಿಸಿದೆ. ಇರಾನ್ ಪ್ರಯಾಣವನ್ನ ಸದ್ಯದ ಮಟ್ಟಿಗೆ ಮುಂದೂಡುವಂತೆ ದೇಶದಲ್ಲಿರುವ ಭಾರತೀಯರಿಗೂ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇಂದ್ರ ಸಚಿವ ಮುರುಗನ್ ದೆಹಲಿ ನಿವಾಸದಲ್ಲಿ ಪ್ರಧಾನಿ ಮೋದಿ ಪೊಂಗಲ್ ಸಂಭ್ರಮ
ಪಾಸ್ಪೋರ್ಟ್ ಅಥವಾ ಐಡಿ ಸಿದ್ಧವಾಗಿರಿಸಿಕೊಳ್ಳಿ, ಇಲ್ಲವೇ ಎಂಇಎ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಿ. ಸಾಧ್ಯವಾದಷ್ಟು ಬೇಗ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ, ಅಲ್ಲಿಂದ ಹೊರ ತರಲು ಪ್ರಯತ್ನಿಸುತ್ತೇವೆ. ಸಾಧ್ಯವಾದಷ್ಟು ಪ್ರತಿಭಟನಾ ವಲಯಗಳಿಂದ ದೂರವಿರಿ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. ಇದನ್ನೂ ಓದಿ: ಅಗ್ನಿ ಅವಘಡ ಆದಾಗ ನಾನು ಅಲ್ಲಿರಲಿಲ್ಲ, ಮನೆಯಲ್ಲಿ ಯಾವ್ದೇ ಹಣ ಪತ್ತೆಯಾಗಿಲ್ಲ: ನ್ಯಾ. ಯಶವಂತ್ ವರ್ಮಾ
ಹೆಚ್ಚಾಯ್ತು ಯುದ್ಧ ಕಾರ್ಮೋಡ
ಇನ್ನೂ ಕತಾರ್ ನೆಲೆಗಳಿಂದ ಇರಾನ್ ಮೇಲೆ ಅಮೆರಿಕ ದಾಳಿ ಮಾಡಬಹುದು ಎನ್ನಲಾಗ್ತಿದೆ. ಹೀಗಾಗಿ, ಸಾಧ್ಯವಾದಷ್ಟೂ ನಾವು ಯುದ್ಧ ತಪ್ಪಿಸಲು ಬಯಸ್ತೇವೆ ಅಂತ ಕತಾರ್ ಹೇಳಿಕೊಂಡಿದೆ. ಈ ಬೆಳವಣಿಗೆಗಳ ನಡುವೆ, ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮಕ್ಕೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ʻಇರಾನ್ ದೇಶಪ್ರೇಮಿಗಳೇ ಪ್ರತಿಭಟನೆ ಮುಂದುವರಿಸಿ, ನಿಮಗೆ ಸಹಾಯ ಮಾಡ್ತೇವೆʼ ಎಂದಿದ್ದ ಟ್ರಂಪ್ ವಿರುದ್ಧ ಇರಾನ್ ಕಿಡಿಕಾರಿದ್ದು, ವಿಶ್ವಸಂಸ್ಥೆಯ ಕದ ತಟ್ಟಿದೆ. ಇರಾನ್ನಲ್ಲಿ ಸ್ಟಾರ್ ಲಿಂಕ್ ನಿನ್ನೆ ರಾತ್ರಿಯಿಂದ ನೆಟ್ವರ್ಕ್ ಸೇವೆ ಒದಗಿಸಿದೆ.
ಗ್ರೀನ್ಲ್ಯಾಂಡ್ಗೆ ಟ್ರಂಪ್ ವಾರ್ನಿಂಗ್
ಈ ಬೆನ್ನಲ್ಲೇ ನ್ಯಾಟೋ ಸಹಾಯ ಕೋರಿರುವ ಗ್ರೀನ್ಲ್ಯಾಂಡ್ಗೆ ಟ್ರಂಪ್ ನೇರ ವಾರ್ನಿಂಗ್ ಕೊಟ್ಟಿದ್ದು, ಗ್ರೀನ್ಲ್ಯಾಂಡ್ ಪ್ರಧಾನಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಗುಡುಗಿದ್ದಾರೆ. ದೇಶದ ಸುರಕ್ಷತೆ ದೃಷ್ಠಿಯಿಂದ ಗ್ರೀನ್ಲ್ಯಾಂಡ್ ವಶಕ್ಕೆ ಪಡೆಯೋದು ಅನಿವಾರ್ಯ ಅಂತ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿಗೆ


