ಅವಾಚ್ಯ ಶಬ್ಧಗಳಿಂದ ನಿಂದನೆ, ಕೊಲೆ ಬೆದರಿಕೆ – ʻಕೈʼ ಮುಖಂಡನ ವಿರುದ್ಧ ಪೌರಾಯುಕ್ತೆ ಅಮೃತಗೌಡ ದೂರು

4 Min Read

– ಶಿಡ್ಲಘಟ್ಟ ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ

ಚಿಕ್ಕಬಳ್ಳಾಪುರ: ಬಳ್ಳಾರಿ ಬ್ಯಾನರ್ ಗಲಾಟೆ (Banner Clash) ಕಾವು ಇನ್ನೂ ತಣ್ಣಗಾಗಿಲ್ಲ. ಅದಾಗ್ಲೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಬ್ಯಾನರ್ ಫೈಟ್ ಶುರುವಾಗಿದೆ. ಸರ್ಕಾರಿ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಬೆದರಿಕೆ ಹಾಕಿದ್ದು, ಮಹಿಳಾ ಅಧಿಕಾರಿ ಕಣ್ಣೀರು ಹಾಕುವಂತೆ ಮಾಡಿದೆ. ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು (BJP JDS Leaders) ನಿಗಿನಿಗಿ ಕೆಂಡವಾಗಿದ್ರೆ, ಅತ್ತ ಉಸ್ತುವಾರಿ ಸಚಿವರು ಏನೂ ಆಗೇ ಇಲ್ವನೋ ಎನ್ನುವಂತೆ ವರ್ತಿಸ್ತಿದ್ದಾರೆ.

ರಾಜ್ಯದಲ್ಲಿ ಬ್ಯಾನರ್ ಗಲಾಟೆಗೆ ಬ್ರೇಕ್ ಇಲ್ಲದಂತೆ ಆಗಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲೂ ಬ್ಯಾನರ್ ಜಟಾಪಟಿ ಜೋರಾಗ್ತಿದೆ. ನಗರಸಭೆ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ವಿರುದ್ಧ ದಂಗೆ ಎಬ್ಬಿಸುವ ಬೆದರಿಕೆ ಹಾಕಿದ್ದಾರಂತೆ. ಈ ಹಿನ್ನೆಲೆ ಪೌರಾಯುಕ್ತೆ ಅಮೃತಗೌಡ (Amrutha Gowda) ಅವರು ಶಿಡ್ಲಘಟ್ಟ ನಗರ ಪೊಲೀಸ್‌ ಠಾಣೆಗೆ ರಾಜೀವ್‌ ಗೌಡ ವಿರುದ್ಧ ದೂರು ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದನೆ, ಕೊಲೆ ಬೆದರಿಕೆ ಆರೋಪ ಉಲ್ಲೇಖಿಸಿದ್ದು, ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?
ಶಿಡ್ಲಘಟ್ಟದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ರಾಜೀವ್‌ ಗೌಡ ಅವರು ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌ಗಳನ್ನ ನಗರದಾದ್ಯಂತ ಅಳವಡಿಸಿದ್ದರು. ನಗರದ ಕೋಟೆ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಲಾಗಿ ಬ್ಯಾನರ್‌ಗಳನ್ನ ಅಳವಡಿಸಲಾಗಿತ್ತು. ಈ ಬ್ಯಾನರ್‌ ವಾಹನಗಳಿಗೆ ತಾಕಿ ಕೆಳಗೆ ಬಿದ್ದಿದೆ. ಈ ಹಿನ್ನೆಲೆ ಆರೋಗ್ಯ ನಿರೀಕ್ಷಕರಾದ ಕೃಷ್ಣಮೂರ್ತಿ ಅವರಿಂದ ಬ್ಯಾನರ್‌ ತೆರವುಗೊಳಿಸಿ ಕಚೇರಿಯಲ್ಲಿ ಇರಿಸಲಾಗಿತ್ತು.

ಈ ವಿಷಯ ತಿಳಿದ ರಾಜೀವ್ ಗೌಡ ಅವರು ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ರು. ನನ್ನನ್ನ ಒಂದು ಹೆಣ್ಣು ಅಂತಲೂ ನೋಡದೇ ಏಕವಚನದಲ್ಲಿ ಸಂಬೋದಿಸಿ ಕೂಡಲೇ ತೆಗೆದುಹಾಕಿರುವ ಬ್ಯಾನರನ್ನ ಮರು ಸ್ಥಾಪಿಸಬೇಕು. ಇಲ್ಲವಾದಲ್ಲಿ ನಿನ್ನ ಕಚೇರಿಗೆ ಬಂದು ಬೆಂಕಿ ಇಟ್ಟು ಸುಟ್ಟು ಹಾಕ್ತೀನಿ ಮತ್ತು ಸಾರ್ವಜನಿಕರನ್ನ ನಿನ್ನ ವಿರುದ್ಧ ಎತ್ತಿ ಕಟ್ಟಿ ಚಪ್ಪಲಿಯಿಂದ ಹೊಡೆಸುವುದಾಗಿ ಜೊತೆಗೆ ಈ ತಾಲ್ಲೂಕಿನಿಂದ ನಿನ್ನನ್ನ ಒದ್ದು ಓಡಿಸುವುದಾಗಿ ಆಸಭ್ಯ ಪದಗಳನ್ನ ಬಳಸಿ ತೇಜೋವದೇ ಮಾಡಿದ್ದಾರೆ. ಜೊತೆಗೆ ನಾನು ಶಿಡ್ಲಘಟ್ಟ ನಗರಸಭೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ.

ಇದರಿಂದ ನನಗೆ ನನ್ನ ಮಾನಹಾನಿಯಾಗಿದೆ, ನನ್ನ ಕುಟುಂಬಕ್ಕೂ ಆಘಾತವಾಗಿದೆ. ನನ್ನ ಸಿಬ್ಬಂದಿ ಕೂಡ ಕೆಲಸ ಮಾಡೋದಕ್ಕೆ ಮಾನಸಿಕ ಧೈರ್ಯ ಕಳೆದುಕೊಂಡಿದ್ದಾರೆ. ಕೇಂದ್ರ ಸ್ಥಾನದಲ್ಲಿ ನಾನು ಒಬ್ಬಳೇ ಇರೋದ್ರಿಂದ ಮುಂದೆ ಆಗುವ ಹಾಗು-ಹೋಗುಗಳಿಗೆ ರಾಜೀವ್‌ ಗೌಡ ಅವರೇ ನೇರ ಹೊಣೆಗಾರರಾಗುತ್ತಾರೆ. ಆದ್ದರಿಂದ ಅವರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 79, 132, 352, 199, 54 ಅಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು, ಅಲ್ಲದೇ ನನ್ನ ಮತ್ತು ನನ್ನ ಸಿಬ್ಬಂದಿಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶಿಡ್ಲಘಟ್ಟದ ಪೌರಾಯುಕ್ತೆಗೆ ಅಶ್ಲೀಲ ನಿಂದನೆ – ʻಕೈʼ ಮುಖಂಡನ ಬಂಧಿಸುವಂತೆ ಸಿಎಸ್‌ಗೆ ಹೆಚ್‌ಡಿಕೆ ಆಗ್ರಹ

ರಾಜೀವ್ ಗೌಡ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಒಡೆದು ಆಕ್ರೋಶ
ಕಾಂಗ್ರೆಸ್ ಮುಖಂಡನ ಬೆದರಿಕೆ ಬೆನ್ನಲ್ಲೇ ಶಿಡ್ಲಘಟ್ಟ ನಗರಸಭೆ ಸಿಬ್ಬಂದಿ ಕೆರಳಿ ಕೆಂಡವಾದ್ರು. ಕಾರ್ಯಾಲಯದ ಎದುರೇ ಪೌರಾಯುಕ್ತೆ ಅಮೃತ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ರು. ಕಚೇರಿ ಎದುರು ಅಂಬೇಡ್ಕರ್ ಭಾವಚಿತ್ರವಿಟ್ಟು ಪ್ರತಿಭಟಿಸಿದ್ರು. ರಾಜೀವ್ ಗೌಡ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ತಮ್ಮನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ ರಾಜಿವ್‌ಗೌಡ ವಿರುದ್ಧ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಧರಣಿ ಕುಳಿತಿದ್ದಾರೆ. ರಾಜೀವ್ ಗೌಡನನ್ನು ಬಂಧಿಸಿ ಅಂತಾ ಆಗ್ರಹಿಸ್ತಿದ್ದಾರೆ. ಪೌರಾಯುಕ್ತೆ ಅಮೃತ ಗೌಡ ಪರ ಪೌರ ಕಾರ್ಮಿಕರು ಸಹ ಪ್ರತಿಭಟನೆಗೆ ಇಳಿದಿದ್ದಾರೆ. ನಗರಸಭೆ ಕಚೇರಿ ಎದುರು ಅಂಬೇಡ್ಕರ್ ಭಾವಚಿತ್ರ ಇಟ್ಟು ಅಧಿಕಾರಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸ್ಥಳಕ್ಕೆ ಬರಬೇಕು. ಸಾರ್ವಜನಿಕವಾಗಿ ಪೌರಾಯುಕ್ತರ ಕ್ಷಮೆ ಕೇಳಬೇಕು ಅಂತಾ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ನಗರಸಭೆಗೆ ಬೆಂಕಿ ಹಾಕಿಸುತ್ತೇನೆ – ಶಿಡ್ಲಘಟ್ಟ ಪೌರಾಯುಕ್ತೆಗೆ ಕೈ ನಾಯಕನಿಂದ ಜೀವ ಬೆದರಿಕೆ

ಶಿಡ್ಲಘಟ್ಟ ಬ್ಯಾನರ್ ಗಲಾಟೆ ಬೆನ್ನಲ್ಲೇ ಪಾಲಿಟಿಕ್ಸ್
ಕರ್ನಾಟಕ ಕಾಂಗ್ರೆಸ್ ದುರಾಡಳಿತದಲ್ಲಿ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಜೋರಾಗಿದೆ ಅಂತಾ ಜೆಡಿಎಸ್ ಪೋಸ್ಟ್ ಮಾಡಿದೆ. ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಸಿನಿಮಾದ ಫ್ಲೆಕ್ಸ್‌ಗಳನ್ನ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಬ್ಯಾನರ್ ತೆಗೆಸಿದವರನ್ನು ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಾರ್ಯಕರ್ತರನ್ನು ಕರೆಸಿ ದಂಗೆ ಎಬ್ಬಿಸುತ್ತೇನೆ ಎಂದು ಮಹಿಳಾಧಿಕಾರಿಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾನೆ. ಸಿಎಂ ಸಿದ್ದರಾಮಯ್ಯ ಗೃಹ ಸಚಿವರ ಪರಮೇಶ್ವರ ಅವರೇ ಪೌರಾಯುಕ್ತೆಗೆ ಧಮ್ಕಿ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಗೂಂಡಾ ರಾಜೀವ್ ಗೌಡನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸಿ ಎಂದು ಪೋಸ್ಟ್ ಮಾಡಿದೆ.

Share This Article