ಸಂಕಷ್ಟದಲ್ಲಿದ್ದ ಭಾರತಕ್ಕೆ ರಾಹುಲ್‌ ಆಪತ್ಬಾಂಧವ – ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಕನ್ನಡಿಗ!

1 Min Read

ರಾಜ್‌ಕೋಟ್‌: ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ (KL Rahul) ಅಮೋಘ ಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ (Team India) ರಾಹುಲ್‌ ಆಸರೆಯಾಗಿದ್ದಾರೆ. 87 ಎಸೆತಗಳಲ್ಲಿ ಶತಕ ಬಾರಿಸಿದ ರಾಹುಲ್‌, ರಾಜ್‌ಕೋಟ್‌ನಲ್ಲಿ (Rajkot) ನಡೆದ ಏಕದಿನ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ʻಕ್ರೈಸಿಸ್‌ ಮ್ಯಾನ್‌ʼ ಬಿರುದು
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 118 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.‌ ಈ ವೇಳೆ ಆಪತ್ಬಾಂಧವನಾಗಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರಾಹುಲ್‌ ಕಿವೀಸ್‌ ಬೌಲರ್‌ಗಳ ಬೆವರಿಳಿಸಿದರು. ಕೊನೆಯವರೆಗೂ ಅಜೇಯರಾಗುಳಿದ ರಾಹುಲ್‌ 92 ಎಸೆತಗಳಲ್ಲಿ 112 ರನ್‌ (11 ಬೌಂಡರಿ, 1 ಸಿಕ್ಸರ್)‌ ಬಾರಿಸುವ ಮೂಲಕ ತಂಡದ ಮೊತ್ತ 250 ರನ್‌ಗಳ ಗಡಿ ದಾಟುವಂತೆ ಮಾಡಿದ್ರು.

ಸದ್ಯ ಕನ್ನಡಿಗನ ಏಕಾಂಗಿ ಹೋರಾಟಕ್ಕೆ ಸೋಷಿಯಲ್‌ ಮೀಡಿಯಾಗಳಲ್ಲೂ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಕೂಡ ಕ್ರೈಸ್‌ ಮ್ಯಾನ್‌ ಎನ್ನುವ ವಿಶೇಷ ಪೋಸ್ಟರ್‌ವೊಂದನ್ನ ಹಂಚಿಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿ ಕಿವೀಸ್‌ಗೆ 285 ರನ್‌ಗಳ ಗುಡಿ ನೀಡಿದೆ. ಇನ್ನುಳಿದಂತೆ ನಾಯಕ ಶುಭಮನ್‌ ಗಿಲ್‌ 56 ರನ್‌, ರೋಹಿತ್‌ ಶರ್ಮಾ 24 ರನ್‌, ವಿರಾಟ್‌ ಕೊಹ್ಲಿ 23 ರನ್‌, ಜಡೇಜಾ 27 ರನ್‌, ನಿತೀಶ್‌ ರೆಡ್ಡಿ 20 ರನ್‌, ಹರ್ಷಿತ್‌ ರಾಣಾ 2 ರನ್‌, ಅಯ್ಯರ್‌ 8 ರನ್‌ ಹಾಗೂ ಸಿರಾಜ್‌ ಅಜೇಯ 2 ರನ್‌ ಕೊಡುಗೆ ನೀಡಿದ್ರು.

Share This Article