ಪತ್ನಿಗೆ ವಂಚನೆ – ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗ ಸಿಕ್ಕಿ ಬಿದ್ದ ಟೆಕ್ಕಿ ಅರೆಸ್ಟ್‌

1 Min Read

– ಅಟ್ರಾಸಿಟಿ ಕೇಸ್‌ನಲ್ಲಿ ಡಿಸಿಆರ್‌ಇ ಪೊಲೀಸರಿಂದ ಬಂಧನಕ್ಕೆ ಒಳಗಾದ ಮೊದಲ ವ್ಯಕ್ತಿ

ಬೆಂಗಳೂರು: ಮೊದಲ ಪತ್ನಿಗೆ (WIfe) ವಂಚಿಸಿ ಪ್ರೇಯಸಿಯ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದ ಟೆಕ್ಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜೆಡ್ರೆಲಾ ಜಬ್ ಆರೂಪ್ ಬಂಧಿತ ಟೆಕ್ಕಿ. ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಪತ್ನಿಯೊಂದಿಗೆ ಬೆಂಗಳೂರಲ್ಲಿ (Bengaluru) ಆರೋಪಿ ವಾಸವಾಗಿದ್ದ. ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಪತ್ನಿ ಕೆಲಸ ಮಾಡುತ್ತಿದ್ದರು.

ಟೆಕ್ಕಿ ಆಗಿದ್ದ ಪತಿಗೆ ಕೆಲಸ ಇಲ್ಲದ್ದಕ್ಕೆ ಲಕ್ಷಾಂತರ ರೂ. ಬರುತ್ತಿದ್ದ ಕೆಲಸವನ್ನು ಪತ್ನಿ ಬಿಟ್ಟುಕೊಟ್ಟಿದ್ದರು. ಒಂದು ಮಗುವಾದ ಬಳಿಕ ಪತ್ನಿಗೆ ಜಾತಿನಿಂದನೆ ಮಾಡಿ ಕಿರುಕುಳ ನೀಡಲು ಜಾಕೋಬ್ ಆರಂಭ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಪತ್ನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಹಲ್ಲೆ ನಡೆಸಿದ್ದ. ಕಿರುಕುಳ ತಾಳಲಾರದೇ ಪತಿ ವಿರುದ್ಧ ಪತ್ನಿ ಅಟ್ರಾಸಿಟಿ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿದ್ದರು. ಇದನ್ನೂ ಓದಿ:  ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ ಸರಣಿ – ಆಟೋ ಡ್ರೈವರ್‌, ಗಾಯಕ ಪ್ರೊಲೊಯ್ ಚಾಕಿ ಹತ್ಯೆ

 

 

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ನಿ ಮಾಹಿತಿ ಆಧಾರದ ಮೇಲೆ ಪೊಲೀಸರು ಪ್ರೇಯಸಿ ಮನೆಗೆ ಹೋಗಿ ಜಾಕೂಬ್‌ನನ್ನು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಮೇಲೆ ಅಟ್ರಾಸಿಟಿ ಕೇಸ್‌ನಲ್ಲಿ ಬಂಧನಕ್ಕೆ ಒಳಗಾದ ಮೊದಲ ಕೇಸ್‌ ಇದಾಗಿದೆ.

ಏನಿದು ಡಿಸಿಆರ್‌ಇ?
ಡಿಸಿಆರ್‌ಇ (DCRE) ಎಂದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(Directorate of Civil Rights Enforcement). ವಿಶೇಷವಾಗಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ  ಜಾತಿ ನಿಂದನೆ, ದೌರ್ಜನ್ಯ ಮತ್ತು ತಾರತಮ್ಯದ ಪ್ರಕರಣಗನ್ನು ತನಿಖೆ ನಡೆಸುತ್ತದೆ.

Share This Article