ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರಿದಿದೆ. ಪ್ರತ್ಯೇಕ ಘಟನೆಯಲ್ಲಿ ಹಿಂದೂ ವ್ಯಕ್ತಿಯಾದ ಗಾಯಕ ಪ್ರೊಲೊಯ್ ಚಾಕಿ ಹಾಗೂ ಆಟೋಚಾಲಕನನ್ನ ಥಳಿಸಿ ಕೊಂದಿರುವ ಘಟನೆ ನಡೆದಿದೆ.
ಘಟನೆ-1
ಅವಾಮಿ ಲೀಗ್ ಕಾರ್ಯಕರ್ತರೂ ಆಗಿದ್ದ ಚಾಕಿ ನ್ಯಾಯಾಂಗ ಬಂಧನದಲ್ಲಿದ್ದಾಗ ಹತ್ಯೆ ಮಾಡಲಾಗಿದೆ.
ಘಟನೆ- 2
ಚಿತ್ತಗಾಂಗ್‌ನ ದಗನ್‌ಭುಯಾನ್‌ನಲ್ಲಿ ದಾಳಿಕೋರರ ಗುಂಪೊಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನ ಥಳಿಸಿ ಕೊಂದಿದೆ. ಸಮೀರ್ ದಾಸ್ (28) ಹತ್ಯೆಗೀಡಾದ ಆಟೋ ಚಾಲಕ. ಹತ್ಯೆ ಬಳಿಕ ಆತನ ಎಲೆಕ್ಟ್ರಿಕ್ ಆಟೋವನ್ನೂ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

