ಬಡವರ ಸೂರಿನ ಸಬ್ಸಿಡಿಗೆ ಕೊಕ್ಕೆ – ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಜ.31 ಕ್ಕೆ ಮನೆ ಭರವಸೆ

2 Min Read

– ಜಿಬಿಎ, ವಸತಿ ನಿಗಮ ಎಡವಟ್ಟಿಗೆ ಬಡವರು ಬಲಿಪಶು

ಬೆಂಗಳೂರು: ಅಮೃತ ಮಹೋತ್ಸವ ಸ್ಕೀಂ ನಲ್ಲಿ ಸಬ್ಸಿಡಿ (ಸಹಾಯಧನ) ರಿಲೀಸ್ ಆದ್ರೂ ದುಡ್ಡಿಗೆ ಕೊಕ್ಕೆ. ದುಡ್ಡು ಕಟ್ಟಿದವರಿಗೆ ಸಿಗದ ಮನೆ, ನೋಟಿಸ್ ಭೀತಿಗೆ ಸಾಲ ಮಾಡಿ ದುಡ್ಡು ಕೊಟ್ಟ ಫಲಾನುಭವಿಗಳು. ಈ ಬಗ್ಗೆ ʻಪಬ್ಲಿಕ್ ಟಿವಿʼಯಲ್ಲಿ (PUBLiC TV) ಸುದ್ದಿ ಪ್ರಸಾರವಾಗಿತ್ತು. ಇದ್ರ ಬೆನ್ನಲ್ಲೇ ಇವತ್ತು ರೊಚ್ಚಿಗೆದ್ದ ಫಲಾನುಭವಿಗಳು ಇಂದು ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Housing Corporation) ಮುಂದೆ ಧರಣಿ ಮಾಡಿದ್ರು. ಕೊನೆಗೂ ʻಪಬ್ಲಿಕ್ ಟಿವಿʼಯ ವರದಿಯ ಫಲಶೃತಿ ಬಡವರ ಸೂರು ಭಾಗ್ಯಕ್ಕೆ ದಿನಾಂಕ ಫಿಕ್ಸ್ ಆಗಿದೆ.

ಸಬ್ಸಿಡಿ ದುಡ್ಡಿನಲ್ಲಿ ಸೂರಿಗಾಗಿ ಕನಸು ಕಂಡ ಬಡ ಜೀವಗಳಿಗೆ ಮಾಡಿದ್ದು ಮಹಾಮೋಸ ಮಾತ್ರ. ಅಮೃತ ಮಹೋತ್ಸವ ಸ್ಕೀಂನಲ್ಲಿ ಗೊಂದಲ ಸೃಷ್ಟಿಯಾಗಿದ್ದು. ಈ ಬಗ್ಗೆ `ಪಬ್ಲಿಕ್ ಟಿವಿ’ಯಲ್ಲೂ ಸತತ ವರದಿ ಬಿತ್ತರವಾಗಿತ್ತು. ಈಗ ರೊಚ್ಚಿಗೆದ್ದ ಜನ ರಾಜೀವ್ ಗಾಂಧಿ ವಸತಿ ನಿಗಮದ ಮುಂದೆ ಪ್ರತಿಭಟನೆ ಮಾಡಿದ್ರು. ಇದನ್ನೂ ಓದಿ: ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

ಸಬ್ಸಿಡಿ ಸಿಕ್ಕಿದ್ರೂ ರಿಲೀಸ್ ಮಾಡದೇ ಇರೋದಕ್ಕೆ, ಸಾಲ (Loan) ಸೋಲ ಮಾಡಿ ದುಡ್ಡು ಕಟ್ಟಿದ್ರೂ ಮನೆ ಸಿಗದ ಬಗ್ಗೆ ಕಿಡಿಕಾರಿದ್ರು. ಈ ಬಗ್ಗೆ ಮಾತಾನಾಡಿದ ಜಿಬಿಎ ವೆಲ್‌ಫೇರ್ ಅಧಿಕಾರಿ ಮುರಳೀಧರ್, ರಾಜೀವ್ ಗಾಂಧಿ ನಿಗಮದಿಂದ ನೋಟಿಸ್ ಹೋಗಿದೆ. ಇದು ಹೋಗಿದ್ದು ತಪ್ಪು, ಹೀಗಾಗಿ ಜನ ಭಯಪಟ್ಟು ಎಲ್ಲಾ ದುಡ್ಡು ಕಟ್ಟಿದ್ದಾರೆ. ನಾವು ನೋಟಿಸ್ ನೀಡದಂತೆ ಸೂಚಿಸಿದ್ದೇವೆ, ಜನವರಿ 31 ರ ಒಳಗೆ ಎಲ್ಲಾ ಫಲಾನುಭವಿಗಳಿಗೆ ಲಿಸ್ಟ್ ಕೊಟ್ಟು ಮನೆ ಕೊಡ್ತೀವಿ ಅಂತ ಹೇಳಿದ್ದಾರೆ.

ಇನ್ನೂ ನೋಟಿಸ್ ಕೊಟ್ಟು ಹಲವು ಫಲಾನುಭವಿಗಳಿಂದ ಫುಲ್ ಅಮೌಂಟ್ ಕಟ್ಟಿಸಿಕೊಂಡ ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್, ಜಿಬಿಎ ಮಹಜರು ಪ್ರಕ್ರಿಯೆ ವಿಳಂಬದಿಂದ ಇಷ್ಟೆಲ್ಲ ಗೊಂದಲವಾಗಿದೆ. ನಾವು ನೋಟಿಸ್ ಕೊಟ್ಟಿದ್ದು ನಿಜ, ಆಮೇಲೆ ಜಿಬಿಎ ಬೇಡ ಅಂದ ಮೇಲೆ ಕೊಟ್ಟಿಲ್ಲ ಅಂತಾ ತಪ್ಪಿದ್ರೂ ಸಮರ್ಥನೆ ಮಾಡಿಕೊಂಡ್ರು. ಇದನ್ನೂ ಓದಿ: 1947ರ ಬಳಿಕ ಫಸ್ಟ್‌ ಟೈಮ್‌ – ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್‌

ಒಟ್ಟಿನಲ್ಲಿ ಎರಡು ಇಲಾಖೆಗಳ ಕಿರಿಕ್‌ಗೆ ಜನ ಅಲೆದಾಡುವ ಪರಿಸ್ಥಿತಿ ಸೃಷ್ಟಿಯಾಗಿದ್ದು ನಿಜಕ್ಕೂ ವಿಪರ್ಯಾಸ. ಇದನ್ನೂ ಓದಿ: ನಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತು – ಶಿವಲಿಂಗೇಗೌಡಗೆ ರೇವಣ್ಣ ತಿರುಗೇಟು

Share This Article