ಸಾಗರ | ಶರಾವತಿ ಹಿನ್ನೀರಲ್ಲಿ ಮುಳುಗಿ ಪಶುವೈದ್ಯ ಸಾವು

1 Min Read
ಶಿವಮೊಗ್ಗ: ಸಾಗರದ (Sagar) ಹಕ್ರೆ ಬಳಿಯ ಶರಾವತಿ ಹಿನ್ನೀರಿನಲ್ಲಿ (Sharavati Back Water) ಮುಳುಗಿ ಪಶು ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.
 
ಮೃತರನ್ನು ಸುನೀಲ್ (38) ಎಂದು ಗುರುತಿಸಲಾಗಿದೆ. ಅವರು ಸಾಗರದ ಮಾಸೂರಿನ ಪಶು ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ (ಜ.11) ಕುಟುಂಬ ಸಮೇತರಾಗಿ ಶರಾವತಿ ಹಿನ್ನೀರಿಗೆ ಪಿಕ್‌ನಿಕ್‌ ಹೋಗಿದ್ದರು. ಈ ವೇಳೆ ಈಜಲು ನೀರಿಗಿಳಿದಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಟೆಕ್ಕಿ ಕೊಲೆ ಕೇಸ್ – ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಬಂಧನ
 
ಸುನೀಲ್ ನೀರಲ್ಲಿ ಮುಳುಗಿ ನಾಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ನೀರಿನಿಂದ ಶವ ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR
Share This Article