ಭೂಮಿಯ ಒಳಗೆ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ: ಹೆಚ್‌ಕೆ ಪಾಟೀಲ್‌

1 Min Read

ಬೆಂಗಳೂರು: ಭೂಮಿಯ ಒಳಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ ಎಂದು ಗದಗ ಉಸ್ತುವಾರಿ ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) ಹೇಳಿದ್ದಾರೆ.

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಕುಟುಂಬದ ಪ್ರಾಮಾಣಿಕತೆಯನ್ನು ನಾನು ಗೌರವಿಸುತ್ತೇವೆ. ಅದು ನಿಧಿ ಅಲ್ಲ ಕುಟುಂಬದ ಬಂಗಾರ ಎಂದು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಅಲ್ಲಿನ ಎಎಸ್‌ಐ ಅಧಿಕಾರಿ ಸಂತೋಷ್ ಗೊಂದಲ ಮೂಡಿಸುತ್ತಿದ್ದಾರೆ. ಅನಗತ್ಯ ಗೊಂದಲ ಉಂಟು ಮಾಡಿದ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಚಿನ್ನಾಭರಣ ನಮ್ಮ ಪೂರ್ವಜರದ್ದು, ವಾಪಸ್ ನೀಡಿ – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

 

ಭೂಮಿಯ ಒಳ ಯಾವುದೇ ಮೌಲ್ಯಯುತವಾದ ವಸ್ತುಗಳು ಸಿಕ್ಕರು ಅದು ಸರ್ಕಾರದ್ದಾಗಿರುತ್ತದೆ. ಜಿಲ್ಲಾ ಆಡಳಿತ ಆ ಬಂಗಾರವನ್ನು ಖಜಾನೆಯಲ್ಲಿ ಭದ್ರವಾಗಿ ಇರಿಸಿದೆ. ಅದು ಆ ಕುಟುಂಬಕ್ಕೆ ಸೇರಿದ್ದಾ? ಆ ಜಾಗದ ಮೂಲ ಮಾಲಿಕರಿಗೆ ಸೇರಿದ್ದ? ರಾಷ್ಟ್ರ ಕೂಟರ ಕಾಲದ್ದ ಚಾಲುಕ್ಯರ ಕಾಲದ್ದ ಎಲ್ಲವೂ ಪರಿಶೀಲನೆ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿಯಲ್ಲಿ ಅಂದಾಜು 1 ಕೆ.ಜಿ ಚಿನ್ನಾಭರಣಗಳ ನಿಧಿ ಪತ್ತೆ

ನಿಧಿ ಅಂದರೆ ಏನು? ಭೂಮಿಯ ಒಳಗೆ ಸಿಕ್ಕಿದ ಬೆಲೆ ಬಾಳುವ ವಸ್ತು ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆ ಕುಟುಂಬದ ಪ್ರಾಮಾಣಿಕತೆ ಯ‌ನ್ನು ನಾವು ಗೌರವಿಸುತ್ತೇವೆ. ಮುಖ್ಯಮಂತ್ರಿಗಳು ಆ ಕುಟುಂಬವನ್ನು ಅಭಿನಂದಿಸಿದ್ದಾರೆ. ಸರ್ಕಾರದ ವತಿಯಿಂದಲೂ ಆ ಕುಟುಂಬವನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಸಾಂದರ್ಭಿಕವಾಗಿ ಅವರಿಗೆ ಏನು ಗೌರವಿಸಬೇಕೋ ಅದನ್ನ ಗೌರವಿಸುತ್ತೇವೆ ಎಂದಿದ್ದಾರೆ.
Share This Article