ಗಡಿಯಲ್ಲಿ ಮತ್ತೆ ಡ್ರೋನ್‌ ಹಾರಿಸಿ ಪಾಕ್‌ ಕಿತಾಪತಿ – ಗುಂಡು ಹಾರಿಸಿ ಉರುಳಿಸಿದ ಸೇನೆ

2 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ (Jammu Kashmir) ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ (LoC) ಬಳಿ ಪಾಕಿಸ್ತಾನಿ ಡ್ರೋನ್‌ಗಳ ಭಾರತೀಯ ಸೇನೆ (Indian Army) ಭಾನುವಾರ ರಾತ್ರಿ ಗುಂಡು ಹಾರಿಸಿದೆ.

ಆಪರೇಷನ್‌ ಸಿಂಧೂರದ (Operation Sindoor) ಸಮಯದಲ್ಲಿ ಯಾವ ರೀತಿ ಡ್ರೋನ್‌ಗಳು (Drone) ಹಾರಾಟ ನಡೆಸಿದ್ದವು ಅದೇ ರೀತಿಯ ಹಾರಾಟ ಕಂಡು ಬಂದಿತ್ತು ಎಂದು ವರದಿಯಾಗಿದೆ.

ಡ್ರೋನ್‌ಗಳು ಬಂದೂಕುಗಳು ಅಥವಾ ಮಾದಕವಸ್ತುಗಳನ್ನು ಬೀಳಿಸಿವೆಯೇ ಎಂದು ಪರಿಶೀಲಿಸಲು ಸೇನೆಯು ಪ್ರದೇಶವನ್ನು ಶೋಧಿಸುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಿಕ್ಕಿನಿಂದ ಬಂದ ಡ್ರೋನ್‌ ಒಂದು ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳ ಸರಕನ್ನು ಬೀಳಿಸಿದೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಸೋಮನಾಥ ದೇವಾಲಯ ಭಾರತದ ಅಸ್ಮಿತೆ ಮತ್ತು ನಾಗರಿಕತೆಯ ಹೆಮ್ಮೆಯ ಸಂಕೇತ – ಪ್ರಧಾನಿ ಮೋದಿ

ಮೆಷಿನ್ ಗನ್‌ಗಳು ಈ ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಸಂಜೆ 6.35 ಕ್ಕೆ ರಾಜೌರಿ ಜಿಲ್ಲೆಯಲ್ಲಿ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದೆ. ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿರುವ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಸಂಜೆ 7.15 ರ ಸುಮಾರಿಗೆ ಡ್ರೋನ್‌ನಂತಹ ವಸ್ತುವೊಂದು ಕೆಲವು ನಿಮಿಷಗಳ ಕಾಲ ಸುಳಿದಾಡಿತ್ತು.

ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಅದರ ನಂತರ ಡ್ರೋನ್ ಹಾರಾಟ ಕಡಿಮೆಯಾಗಿತ್ತು. ನಿನ್ನೆ ಒಂದೇ ದಿನದಲ್ಲಿ ಕನಿಷ್ಠ ಐದು ಪಾಕಿಸ್ತಾನಿ ಡ್ರೋನ್ ಆಕ್ರಮಣಗಳು ವರದಿಯಾಗಿವೆ.

ಪಾಕಿಸ್ತಾನವು ಭಾರತೀಯ ಭೂಪ್ರದೇಶದ ಮೇಲೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಬೀಳಿಸಲು ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಲು ಡ್ರೋನ್‌ಗಳನ್ನು ಬಳಸುತ್ತದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದು ಹಾಕಿತ್ತು.

Share This Article