BBK 12 | ಫಿನಾಲೆ ವಾರಕ್ಕೆ ಕೊನೆಯ ಸ್ಪರ್ಧಿಯಾಗಿ ರಘು ಎಂಟ್ರಿ – ರಾಶಿಕಾ ಔಟ್

0 Min Read

ಬಿಗ್‌ಬಾಸ್ ಸೀಸನ್ 12ರ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಈ ವಾರ ರಾಶಿಕಾ ಮನೆಯಿಂದ ಹೊರಬಂದಿದ್ದಾರೆ.

ಈ ವಾರ ಕ್ಯಾಪ್ಟನ್‌ ಧನುಷ್‌ ಹೊರತಾಗಿ ಇಡೀ ಮನೆ ನಾಮಿಮೇಟ್‌ ಆಗಿದ್ದರು.‌ ಅದರಂತೆ ಕೊನೆಯಲ್ಲಿ ರಘು ಹಾಗೂ ರಾಶಿಕಾ ಡೇಂಜರ್‌ ಝೋನ್‌ನಲ್ಲಿ ಇದ್ದರು. ಕಡೆಗೆ ರಘು ಸೇಫ್‌ ಆಗಿ ಫಿನಾಲೆ ಎಂಟ್ರಿ ಕೊಟ್ಟರೆ, ಇತ್ತ ರಾಶಿಕಾ ಮನೆಯಿಂದ ಔಟ್‌ ಆಗಿದ್ದಾರೆ.

ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಒಬ್ಬರೇ ಸೇಫ್‌ ಆಗಿದ್ದರು. ಭಾನುವಾರದ ಎಪಿಸೋಡ್‌ನಲ್ಲಿ ಮೊದಲು ಗಿಲ್ಲಿ ಹಾಗೂ ರಕ್ಷಿತಾ ಸೇಫ್‌ ಆದರು. ಬಳಿಕ ಧ್ರುವಂತ, ಕಾವ್ಯ ಸೇಫ್‌ ಆದರು.

ಈ ಮೂಲಕ ಫಿನಾಲೆ ವಾರಕ್ಕೆ ಧನುಷ್‌, ಅಶ್ವಿನಿ, ಗಿಲ್ಲಿ, ರಕ್ಷಿತಾ, ಧ್ರುವಂತ, ಕಾವ್ಯ, ರಘು ಎಂಟ್ರಿ ಕೊಟ್ಟಿದ್ದಾರೆ.

Share This Article