ನರೇಗಾ ವಿಚಾರದಲ್ಲಿ ಚರ್ಚೆಗೆ ನಾವು ಸಿದ್ಧ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮರು ಸವಾಲ್

1 Min Read

ಬೆಂಗಳೂರು: ನರೇಗಾ ವಿಚಾರದಲ್ಲಿ ಚರ್ಚೆ ಮಾಡೋಕೆ ನಾನು ಯಾವಾಗಲೂ ಸಿದ್ಧ ಅಂತ ಕೇಂದ್ರ ಸಚಿವ ಕುಮಾರಸ್ವಾಮಿಗೆ (H.D.Kumaraswamy) ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.

ನರೇಗಾ ವಿಚಾರದಲ್ಲಿ ಚರ್ಚೆಗೆ ಸಿದ್ಧ ಎಂಬ ಕುಮಾರಸ್ವಾಮಿ ಸವಾಲ್‌ಗೆ ತಿರುಗೇಟು ಕೊಟ್ಟ ಸಿಎಂ, ನರೇಗಾ ವಿಚಾರವಾಗಿ ನಾವು ಯಾವಾಗಲೂ ಚರ್ಚೆಗೆ ರೆಡಿ. ನಾವು ದೊಡ್ಡ ಆಂದೋಲನವನ್ನೇ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಬಾಡಿಗೆ ಕೊಡುವವರ ಮೇಲೆ ಹದ್ದಿನ ಕಣ್ಣು: ಪರಮೇಶ್ವರ್

ನರೇಗಾ ವಿಚಾರ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಾಡುವ ವಿಚಾರಕ್ಕೆ ಬಿಜೆಪಿ ಅವರು ರಾಜ್ಯಕ್ಕೆ ಎಷ್ಟೇ ಅನ್ಯಾಯ ಆದ್ರು ಮಾತಾಡಲ್ಲ‌. ಕೇಂದ್ರ ಸರ್ಕಾರ ಎಷ್ಟೇ ಅನ್ಯಾಯ ಮಾಡಿದ್ರು ಅವರನ್ನ ಸಮರ್ಥನೆ ಮಾಡಿಕೊಳ್ತಾರೆ. ಬಿಜೆಪಿ ಅವರು ಕೇಂದ್ರ ಸರ್ಕಾರ ಏನೇ ನಿರ್ಧಾರ ಮಾಡಿದ್ರು ಸರಿ ಅಂತ ಹೇಳ್ತಾರೆ.‌ ಕರ್ನಾಟಕಕ್ಕೆ ಆಗೋ ಅನ್ಯಾಯವನ್ನ ಬಿಜೆಪಿ ಅವರು ನ್ಯಾಯ ಅಂತ ಹೇಳೋದು ಮಹಾ ಅಪರಾಧ ಅಂತ ಬಿಜೆಪಿ-ಜೆಡಿಎಸ್ ವಿರುದ್ಧ ಸಿಎಂ ಕಿಡಿಕಾರಿದರು.

ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ, ಕುಮಾರಸ್ವಾಮಿ ಬಿಜೆಪಿ ಅವರು ಬರೀ ಸುಳ್ಳು ಹೇಳುತ್ತಾರೆ. ಅವರಿಗೆಲ್ಲ ಉತ್ತರ ಕೊಡುತ್ತಾ ಕೂರೋಕೆ ಆಗುತ್ತಾ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾರು ಡ್ಯಾಡಿ? Daddy Is Home ಅಂದ್ರೆ ಏನು? – ಮೊದಲು ರಾಜೀನಾಮೆ ಕೊಡಲಿ: ಹೆಚ್‌ಡಿಕೆ ವಿರುದ್ಧ ಡಿಕೆಸು ಟಾಂಗ್

Share This Article