ಶಬರಿಮಲೆ ಚಿನ್ನ ಕಳ್ಳತನ ಕೇಸ್ – SITಯಿಂದ ಪ್ರಧಾನ ಅರ್ಚಕ ಕಂದರಾರು ರಾಜೀವ್ ಅರೆಸ್ಟ್

1 Min Read

ತಿರುವನಂತಪುರಂ: ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಎಸ್‌ಐಟಿ (SIT) ಅಧಿಕಾರಿಗಳು ಇದೀಗ ದೇಗುಲದ ಪ್ರಧಾನ ಅರ್ಚಕನನ್ನು ಅರೆಸ್ಟ್ ಮಾಡಿದ್ದಾರೆ.

ಕಂದರಾರು ರಾಜೀವ್ ಬಂಧಿತ ಆರೋಪಿಯಾಗಿದ್ದು, ದೇಗುಲದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್ – SITಗೆ ಹೆಚ್ಚುವರಿ ಇಬ್ಬರು ಅಧಿಕಾರಿಗಳ ಸೇರ್ಪಡೆಗೆ ಕೇರಳ ಹೈಕೋರ್ಟ್ ಅನುಮತಿ

ಚಿನ್ನ ಕಳ್ಳತನದ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಬಗ್ಗೆ ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ. ಕಂದರಾರು ರಾಜೀವ್, ತಂತ್ರಿ ಉನ್ನಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ ನೆಪದಲ್ಲಿ ನಡೆದ ಪ್ರಾಯೋಜಕತ್ವದ ನಂತರ ಚಿನ್ನದ ಕಳ್ಳತನಕ್ಕೆ ಕಾರಣವಾಯಿತು ಎಂಬ ಆರೋಪ ಕೇಳಿಬಂದಿದೆ. ಫಲಕಗಳಿಗೆ ಚಿನ್ನ ಲೇಪಿಸಲು ಕಂದರಾರು ರಾಜೀವ್ ಅನುಮತಿ ನೀಡಿದ್ದ ಎಂಬುದು ತನಿಖೆಯಲ್ಲಿ ಮಹತ್ವದ ಅಂಶವಾಗಿದೆ. ಕಳೆದ ನವೆಂಬರ್‌ನಲ್ಲಿಯೇ ಎಸ್‌ಐಟಿ ರಾಜೀವ್‌ನಿಂದ ಮಾಹಿತಿ ಸಂಗ್ರಹಿಸಿತ್ತು.

ಎಸ್‌ಐಟಿ ಮಾಹಿತಿ ಪ್ರಕಾರ, ದೇಗುಲ ಬಿಡೋದಕ್ಕೂ ಮೊದಲು 2019ರ ಜುಲೈನಲ್ಲಿ ಚಿನ್ನದ ತೂಕ ಮಾಡಿದಾಗ 42.8 ಕೆಜಿ ಇತ್ತು. ಆದರೆ ಅದು ಕೇರಳದಿಂದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ತಲುಪಿದ ಬಳಿಕ ತೂಕ 38.25 ಕೆ.ಜಿ ಆಗಿತ್ತು. ಅಂದರೆ ಅಯ್ಯಪ್ಪನ ಗುಡಿ ಚಿನ್ನದ ಬಾಗಿಲು ಹಾಗೂ ದ್ವಾರಪಾಲಕರು ಕೇರಳದಿಂದ ಚೆನ್ನೈ ತಲುಪುವುದರೊಳಗೆ 39 ಕೆಜಿ ಆಗಿತ್ತಂತೆ. ಪ್ರಯಾಣದ ನಡುವೆ ಕೇರಳ, ಕರ್ನಾಟಕ, ಆಂಧ್ರ ಕೆಲವು ಪ್ರಭಾವಿಗಳ ಮನೆಯಲ್ಲಿ ಪೂಜೆ ಮಾಡಿಸಲಾಗಿದೆ. ಈ ಗ್ಯಾಪ್‌ನಲ್ಲಿ ಚಿನ್ನ ಎಗರಿಸಿದ್ದಾರೆ ಎನ್ನಲಾಗಿದೆ.

2019ರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲದ ಎರಡು ಬಾಗಿಲು ಹಾಗೂ 2 ದ್ವಾರಪಾಲಕರಿಗೆ ಚಿನ್ನ ಮರು ಲೇಪನ ಮಾಡಲು ಯೋಜಿಸಲಾಗಿತ್ತು. ತಮಿಳುನಾಡು ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆ ಉಚಿತವಾಗಿ ಚಿನ್ನ ಮರುಲೇಪನ ಮಾಡೋದಾಗಿ ಮನವಿ ಮಾಡಿದ್ದರಿಂದ ಅದೇ ಕಂಪನಿಗೆ ಕೆಲಸ ಕೊಡಲಾಗಿತ್ತು.ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್ – ಆರೋಪಿ ಮಾಸ್ಟರ್ ಪ್ಲ್ಯಾನ್‌ಗೆ ಕೇರಳ SIT ಶಾಕ್

Share This Article