ಯಶ್ ಹುಟ್ಟುಹಬ್ಬದ ಹಿನ್ನೆಲೆ `ಟಾಕ್ಸಿಕ್’ ಚಿತ್ರದ (Toxic Movie) ನಾಯಕನ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ರಾಯ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಕಾಣಿಸ್ಕೊಂಡಿದ್ದು ಬೋಲ್ಡ್ ಆ್ಯಂಡ್ ಅಗ್ರೆಸ್ಸಿವ್ ರಾಯನ ಪರಿಚಯ ಆಗಿದೆ. ಹಾಗಾದ್ರೆ ರಾಯ ಅಂದ್ರೇನು ಎಂಬ ಚರ್ಚೆ ಉಂಟಾಗಿದೆ. ಹೌದು, ಒಬೊಬ್ಬರು ಒಂದೊಂದು ವಿಧದಲ್ಲಿ ರಾಯ ಹೆಸರನ್ನ ಡೀಕೋಡ್ ಮಾಡುತ್ತಿದ್ದಾರೆ.
ಟಾಕ್ಸಿಕ್ ಚಿತ್ರದ ಮೂಲಕ ಯಶ್ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಭಾರತೀಯ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡುವಂತೆ ಟೀಸರ್ ಬಿಟ್ಟಿದ್ದಾರೆ. ಇಲ್ಲಿ ಯಶ್ ಪಾತ್ರದ ಹೆಸರು ರಾಯ ಅನ್ನೋದು ಹೈಲೈಟ್‌ನಲ್ಲೊಂದು. ಹೀಗಾಗಿ ರಾಯ ಅನ್ನೋ ಹೆಸರಿನ ವಿಶೇಷ ಏನಿರಬಹುದು ಅನ್ನೋ ಹುಡುಕಾಟ ಶುರುವಾಗಿದೆ.
`ರಾ’ ಅಂದ್ರೆ ರಾಕಿಂಗ್ ಸ್ಟಾರ್ `ಯ’ ಅಂದ್ರೆ ಯಶ್ ಎಂದೂ ಆಗಬಹುದು. ಇಷ್ಟೇ ಅಲ್ಲ `ರಾ’ ಅಂದ್ರೆ ಯಶ್ ಪತ್ನಿ ರಾಧಿಕಾ ಪಂಡಿತ್ ಹಾಗೂ `ಯ’ ಅಂದ್ರೆ ಯಶ್ ಎಂದು ಇನ್ನೊಂದು ವಿಧದಲ್ಲೂ ಡಿಕೋಡ್ ಮಾಡಲಾಗುತ್ತಿದೆ. ಅಸಲಿಗೆ ರಾಯ ಅಂದ್ರೆ ಏನು..? ರಾಕಿಭಾಯ್ ಪಾತ್ರ ಮೀರಿ ರಾಯ ಕ್ಲಿಕ್ ಆಗುತ್ತಾ..? ರಾಯ ಅಸಲಿ ಫುಲ್‌ಫಾರ್ಮ್ ಆದ್ರೂ ಏನು..? ಎಲ್ಲವೂ ಮಾರ್ಚ್ 19ರ ದಿನ ಟಾಕ್ಸಿಕ್ ರಿಲೀಸ್ ದಿನವೇ ತಿಳಿಯುತ್ತದೆ. ಅಲ್ಲಿಯವರೆಗೂ ಫ್ಯಾನ್ಸ್ ಮನಸ್ಸಿಗೆ ಬಂದಂತೆ ಡೀಕೋಡ್ ಮಾಡಿಕೊಳ್ಳಬಹುದು ಎಂದು ಯಶ್ ತಲೆಗೆ ಹುಳ ಬಿಟ್ಟಂತಿದೆ.

