ಟೆಹ್ರಾನ್: ಇರಾನ್ (Iran) ಆರ್ಥಿಕತೆಯ ಕುಸಿತದಿಂದಾಗಿ ಸರ್ಕಾರದ ವಿರುದ್ಧ ಬುಗಿಲೆದ್ದಿರುವ ಪ್ರತಿಭಟನೆ, ಹಿಂಸಾಚಾರದಲ್ಲಿ ಸುಮಾರು 35 ಮಂದಿ ಮೃತಪಟ್ಟಿದ್ದಾರೆ.
29 ಪ್ರತಿಭಟನಾಕಾರರು, ನಾಲ್ಕು ಮಕ್ಕಳು ಮತ್ತು ಇರಾನ್‌ನ ಭದ್ರತಾ ಪಡೆಗಳ ಇಬ್ಬರು ಸದಸ್ಯರು ಮೃತಪಟ್ಟಿದ್ದಾರೆ. ಕಳೆದೊಂದು ವಾರದಿಂದ ಇರಾನ್‌ನ 31 ಪ್ರಾಂತ್ಯಗಳಲ್ಲಿ 27ರಲ್ಲಿ 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಈ ವೇಳೆ 1,200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.
ಇರಾನ್ ಶಾಂತಿಯುತ ಪ್ರತಿಭಟನಾಕಾರರನ್ನು ಹಿಂಸಾತ್ಮಕವಾಗಿ ಕೊಂದರೆ, ಅಮೆರಿಕ ಅವರ ರಕ್ಷಣೆಗೆ ಬರುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಯುಎಸ್ ಮಿಲಿಟರಿ ಟೆಹ್ರಾನ್‌ನ ದೀರ್ಘಕಾಲದ ಮಿತ್ರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ನಂತರ ಈ ಹೇಳಿಕೆಗಳು ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಂಡವು.

