IPL 2026 | ಬೆಂಗಳೂರಿನಿಂದ ಐಪಿಎಲ್‌ ಎತ್ತಂಗಡಿ..? – ಟ್ವಿಸ್ಟ್‌ ಕೊಟ್ಟ ಎಂಸಿಎ ಟ್ವೀಟ್‌!

1 Min Read

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಮತ್ತೆ ಐಪಿಎಲ್ (IPL) ಪಂದ್ಯಗಳು ಶುರುವಾಗುವ ಕನಸು ಚಿಗುರುತ್ತಿರುವ ನಡುವೆಯೇ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಡಿರುವ ಟ್ವೀಟ್ ಒಂದು ಬೆಂಗಳೂರಿನಿಂದ ಐಪಿಎಲ್ ಶಿಫ್ಟ್ ಆಗುವ ಬಗ್ಗೆ ಇದ್ದ ಅನುಮಾನವನ್ನ ಮತ್ತಷ್ಟು ಹೆಚ್ಚಿಸಿದೆ.

ರಾಜಸ್ಥಾನ್ ರಾಯಲ್ಸ್ (Rjasthan Royals) ಮತ್ತು ಆರ್‌ಸಿಬಿ (RCB) ತಂಡಗಳ ಪೈಕಿ ಒಂದು ತಂಡದ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಮೈದಾನ ಸಿದ್ಧವಾಗಿದ್ದು, ಅಲ್ಲದೇ ಈ ಎರಡು ತಂಡಗಳ ಪೈಕಿ ಒಂದು ತಂಡಕ್ಕೆ ಪುಣೆ ಮೈದಾನ ತವರು ಮೈದಾನವಾಗೋದು ಖಚಿತ ಎಂದು ಎಂಸಿಎ (MCA) ಮಾಹಿತಿ ನೀಡಿದೆ. ಇದನ್ನೂ ಓದಿ: IPL ನಿಂದ ಮುಸ್ತಾಫಿಜುರ್ ಔಟ್‌ – ವಿಶ್ವಕಪ್‌ ಆಡಲು ಭಾರತಕ್ಕೆ ಬರಲ್ಲ; ಪಾಕ್‌ ರೀತಿ ಕ್ಯಾತೆ ತೆಗೆದ ಬಾಂಗ್ಲಾ

ಕೆಲ ವಾರಗಳ ಹಿಂದಷ್ಟೇ ಆರ್‌ಸಿಬಿ ಮತ್ತು ಆರ್‌ಆರ್ ಆಡಳಿತ ಮಂಡಳಿಗಳು ಪುಣೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದವು. ಆ ಭೇಟಿ ಬಳಿಕ ಈಗ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ಎಂಸಿಎ, ಬಿಸಿಸಿಐ ಮುಂದಿನ ದಿನಗಳಲ್ಲಿ ಈ ತಂಡಗಳಲ್ಲಿ ಒಂದರ ಮುಂಬರುವ ಪಂದ್ಯಗಳಿಗೆ ಎಂಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ಸ್ಥಳವಾಗಿ ಅನುಮೋದಿಸುತ್ತದೆ ಎಂಬುದು ಖಚಿತವಾಗಿದೆ. ಬಿಸಿಸಿಐ ಬೆಂಬಲದೊಂದಿಗೆ, ಐಪಿಎಲ್ ಪಂದ್ಯಗಳನ್ನು ಶೀಘ್ರದಲ್ಲೇ ಪುಣೆಯಲ್ಲಿ ಆಯೋಜಿಸಬಹುದು ಎಂದು ಟ್ವಿಟ್ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: IND vs NZ | ಕಿವೀಸ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಪಾಂಡ್ಯ, ಶಮಿಗೆ ಕೂಡಿಬಾರದ ಮುಹೂರ್ತ!

Share This Article