– ರಾಮನ ಜಪ ಮಾಡೋರಿಗೆ ವಾಲ್ಮೀಕಿ ಪೋಸ್ಟರ್ ಸಹಿಸೋಕಾಗಲ್ವಾ?
ಬೆಂಗಳೂರು: ಬಳ್ಳಾರಿಯನ್ನ ʻರಿಪಬ್ಲಿಕ್ ಆಫ್ ಬಳ್ಳಾರಿʼ (Republic Of Ballari) ಮಾಡಿದ್ದೇ ಬಿಜೆಪಿ ಅವರು. ಗಲಾಟೆ ಬಗ್ಗೆ ತನಿಖೆ ಆಗ್ತಿದೆ. ಬಿಜೆಪಿ ಅವರು ನಮಗೆ ಪಾಠ ಹೇಳಿಕೊಡೋದು ಬೇಡ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ಗಲಾಟೆ (Ballari Clash) ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಳ್ಳಾರಿ ಎಸ್ಪಿ (Bllari SP) ಕರ್ತವ್ಯ ಲೋಪ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ವೈಯಕ್ತಿಕ ಯಾವುದು ಇಲ್ಲ. ಅಲ್ಲಿ ಗಲಾಟೆ ಆಗಿದ್ದು ನಿಜ. ವಾತಾವರಣ ಕೆಟ್ಟಿದ್ದು ನಿಜ ಅದಕ್ಕೆ ಕ್ರಮ ಆಗಿದೆ. ಈಗಾಗಲೇ ಸಿಎಂ, ಡಿಸಿಎಂ, ಗೃಹ ಸಚಿವರು ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದ ಹೇಳಿದ್ದಾರೆ. ತನಿಖೆ ಆಗಲಿ ಅಂತ ತಿಳಿಸಿದರು. ಇದನ್ನೂ ಓದಿ: Ballari Clash | ಕಾಂಗ್ರೆಸ್ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ – ಡಿಕೆಶಿ
ಇನ್ನೂ ʻರಿಪಬ್ಲಿಕ್ ಆಫ್ ಬಳ್ಳಾರಿʼ ಮಾಡಿದ್ದು ಬಿಜೆಪಿ (BJP) ಅವರು. ಅಲ್ಲಿ ಮಾತಾಡಿರೋದರು ಎಲ್ಲರು ಜೈಲಿಗೆ ಹೋಗಿ ಬಂದವರು. ನಮಗೆ ಕಾನೂನು ಪಾಠ ಹೇಳ್ತಾರಾ? ಆ ಭಾಗ ಹಾಳು ಮಾಡಿದವರು ನಮಗೆ ಕಾನೂನು ಸಂವಿಧಾನ ಹೇಳಿ ಕೊಡ್ತಾರಾ? ಪೋಸ್ಟರ್ ಹಾಕಿದ್ರೆ ಏನ್ ತಪ್ಪು? ಹೆಸರಿಗೆ ಮಾತ್ರ ರಾಮನ ಜಪ ಮಾಡೋದು ಅಲ್ಲ. ರಾಮಾಯಣ ಬರೆದ ವಾಲ್ಮೀಕಿ ಪೋಸ್ಟರ್ ಸಹಿಸೋಕೆ ಆಗೊಲ್ಲವಾ? ಸಾರ್ವಜನಿಕರಿಗೆ ಅನಾನುಕೂಲ ಮಾಡಬಾರದು ಇಂತಹ ವಾತಾವರಣ ಸೃಷ್ಟಿ ಮಾಡೋದು ಸರಿಯಲ್ಲ ಅಂತ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪವನ್ ನಿಜ್ಜೂರು ಅಮಾನತು – ಬ್ಯಾನರ್ ಗಲಾಟೆಯಾದಾಗ ಪಾರ್ಟಿ ಮೂಡ್ನಲ್ಲಿದ್ದ ಬಳ್ಳಾರಿ ಎಸ್ಪಿ!
ಕಾಂಗ್ರೆಸ್ ಅವರು ಬಳ್ಳಾರಿಯನ್ನ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡೋಕೆ ಹೊರಟಿಲ್ಲ. ಅದು ಬಿಜೆಪಿ ಅವರು ಮಾಡಿರೋದು. ಕರ್ನಾಟಕ ಕೂಡಾ ಕಾಂಗ್ರೆಸ್ ರಿಪಬ್ಲಿಕ್. ಜನ ಮತ ಹಾಕಿ ನಮ್ಮನ್ನ ಗೆಲ್ಲಿಸಿದ್ದಾರೆ ಅಂತ ಬಿಜೆಪಿ ವಿರುದ್ದ ಕಿಡಿ ಕಾರಿದರು. ಇದನ್ನೂ ಓದಿ: ಬಳ್ಳಾರಿ ಎಸ್ಪಿ ಪವನ್ ನಿಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ, ವಿಶ್ರಾಂತಿಯಲ್ಲಿದ್ದಾರೆ: ಡಿಸಿಪಿ ಶ್ರೀಹರಿಬಾಬು


