ಉಗ್ರ ನಾಸಿರ್‌ಗೆ ಜೈಲಲ್ಲಿ ನೆರವು ಕೇಸ್‌ – ASI ಚಾಂದ್‌ ಪಾಷಾ ಸೇರಿ ಮೂವರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

1 Min Read

ಬೆಂಗಳೂರು: ಉಗ್ರ ನಾಸಿರ್‌ಗೆ ಜೈಲಿನಲ್ಲಿ ನೆರವು ನೀಡಿದ ಪ್ರಕರಣ ತನಿಖೆ ಮಾಡಿ ಎನ್‌ಐಎ (NIA) ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಮೂವರು ಆರೋಪಿಗಳ ಮೇಲೆ ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪಪಟ್ಟಿಯಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸಿಎಆರ್ ಎಎಸ್‌ಐ ಚಾಂದ್ ಪಾಷಾ (Chand Pasha), ಅನಿಸಾ ಫಾತಿಮಾ, ಡಾ‌ ನಾಗರಾಜ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇದನ್ನೂ ಓದಿ: ಫಿಲ್ಮ್‌ ಸ್ಟೈಲ್‌ ಬಾಂಬ್‌ ಸ್ಫೋಟಿಸಿ ಜೈಲಿನಲ್ಲಿರುವ ಉಗ್ರ ನಾಸೀರ್‌ ಬಿಡುಗಡೆ ಪ್ಲ್ಯಾನ್‌ – ಶಾಕಿಂಗ್‌ ಸಂಚು ಬಯಲು

ಈ‌ ಹಿಂದೆಯೂ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪರಾರಿಯಾಗಿದ್ದ ಜುನೈದ್ ಸೇರಿ 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಇದೀಗ ಹೆಚ್ಚುವರಿಯಾಗಿ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಅನಿಸ್ ಫಾತಿಮಾ, ಜುನೈದ್ ಅಹಮದ್ ತಾಯಿ ನಾಸಿರ್‌ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದರು. ಮಗನ‌ ಸೂಚನೆಯಂತೆ ಹ್ಯಾಂಡ್ ಗ್ರೈನೇಡ್, ವಾಕಿಟಾಕಿ ನಿರ್ವಹಣೆ, ಆರೋಪಿಗಳ ನಡುವೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಿದ್ದಳು. ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ಫಾತಿಮಾ ನೆರವು ನೀಡಿದ್ದರು.

ಸಿಎಆರ್ ಎಎಸ್ಐ ಆಗಿದ್ದ ಉಗ್ರ ನಾಸಿರ್‌ಗೆ ಚಾಂದ್‌ ಪಾಷಾ ಮಾಹಿತಿ ರವಾನಿಸುತ್ತಿದ್ದರು. ಬೆಂಗಾವಲು ಪಡೆ ವಿವರಗಳನ್ನು ಸಲ್ಮಾನ್ ಖಾನ್‌ಗೆ ರವಾನೆ ಮಾಡುತ್ತಿದ್ದ. ಹಣದ ಆಸೆಗಾಗಿ ಶಂಕಿತ ಉಗ್ರರ ಮಾಹಿತಿ ಸೋರಿಕೆ ಮಾಡಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋ ವೈದ್ಯನಾಗಿದ್ದ ಡಾ ನಾಗರಾಜ್ ಕಾನೂನು ಬಾಹಿರವಾಗಿ ಮೊಬೈಲ್ ಫೋನ್‌ಗಳ‌ ಸಾಗಾಟ ಮಾಡುತ್ತಿದ್ದ. ಖೈದಿಗಳಿಂದ ಹಣ ಪಡೆದು ಆರೋಪಿ ಮೊಬೈಲ್ ಮಾರಾಟ ಮಾಡುತ್ತಿದ್ದ. ನಾಸಿರ್‌ ಕೂಡ ಮೊಬೈಲ್‌ ಮಾರಾಟ ಮಾಡುತ್ತಿದ್ದ. ಆ ಮೊಬೈಲ್ ಮೂಲಕ ನಾಸಿರ್‌ ಭಯೋತ್ಪಾದನಾ ಕೃತ್ಯ ನಡೆಸುತ್ತಿದ್ದ ಅನ್ನೋದು ಕೂಡ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಉಲ್ಲೇಖಿಸಿದೆ.

Share This Article