ಕ್ಯಾಬ್‌ಗೆ ಕಾರು ಟಚ್ – ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕನ ಮೇಲೆ ಯುವಕರ ಗುಂಪಿನಿಂದ ಹಲ್ಲೆ

1 Min Read

ಬೆಂಗಳೂರು: ಕ್ಯಾಬ್‌ಗೆ ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಎಣ್ಣೆ ಮತ್ತಿನಲ್ಲಿದ್ದ ಯುವಕರ ಗುಂಪು ಕ್ಯಾಬ್ ಚಾಲಕನ (Cab Driver) ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಕಾರ್ಪೋರೇಷನ್ ಸರ್ಕಲ್ (Corporation Circle) ಬಳಿ ನಡೆದಿದೆ.

ಕಾರ್ಪೋರೇಷನ್ ಸರ್ಕಲ್ ಬಳಿ ಕ್ಯಾಬ್ ನಿಂತಿತ್ತು. ಈ ವೇಳೆ ಯುವಕರಿದ್ದ ಕಾರು ಹಿಂದಿನಿಂದ ಬಂದು ಕ್ಯಾಬ್‌ಗೆ ಟಚ್ ಆಗಿದೆ. ಇದನ್ನು ಕ್ಯಾಬ್ ಚಾಲಕ ಪ್ರಶ್ನಿಸಿದ್ದಾನೆ. ಈ ವೇಳೆ ಯುವಕರು ಚಾಲಕನನ್ನು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಗಳ ಬಿಡಿಸಲು ಮುಂದಾದ ಕೆಲ ಚಾಲಕರ ಮೇಲೆಯೂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಜಗಳ ತಾರಕಕ್ಕೇರಿ ಕ್ಯಾಬ್ ಚಾಲಕನನ್ನು ನೆಲಕ್ಕೆ ಹಾಕಿ ಯುವಕರು ತುಳಿದಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು ತೂರಾಡಿದ ಜನ

10ಕ್ಕೂ ಹೆಚ್ಚು ಯುವಕರು ಪುಡಾಂಟ ನಡೆಸಿದ್ದು, ನಡುರಸ್ತೆಯಲ್ಲಿ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರು ನಡೆಸಿದ ಹಲ್ಲೆಗೆ ಚಾಲಕ ಒದ್ದಾಡಿದ್ದಾನೆ. ಇಂದು ಬೆಳಗಿನ ಜಾವ 3:16ರ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: New Year 2026 | ಎಣ್ಣೆ ಏಟಲ್ಲಿ ಪೊಲೀಸರಿಗೆ ಯುವಕ ಅವಾಜ್‌ – ಕುಡಿದು ರಂಪಾಟ ಮಾಡಿದ ಯುವತಿ

Share This Article