ಬೆಂಗಳೂರು: “ಗುಡ್‍ಬೈ 2025, ವೆಲ್‍ಕಂ 2026”. ಹೊಸ ಹುರುಪಿನೊಂದಿಗೆ ಹೊಸ ವರ್ಷಕ್ಕೆ (New Year 2026) ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2026 ರ ವರ್ಷವನ್ನ ಸ್ವಾಗತಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲೂ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ್ರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ (Bengaluru) ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು.
ಮೊಬೈಲ್‌ಗಳಂತೂ (Mobile) ಫುಲ್ ಬ್ಯುಸಿಯಾಗಿದ್ದವು. ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭ ಸಂದೇಶಗಳನ್ನ ಕಳಿಸೋದ್ರಲ್ಲಂತೂ ಯೂತ್ಸ್ ತಲ್ಲಿನರಾಗಿದ್ರು. ಇದನ್ನೂ ಓದಿ: 2025ಕ್ಕೆ ವಿದಾಯ ಹೇಳಿ… 2026ನ್ನು ಪ್ರೀತಿಯಿಂದ ಸ್ವಾಗತಿಸಿ
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಪೊಲೀಸ್ ನಮ್ಮ ತಂದೆ ಸರ್ಕಲ್ ಇನ್ಸ್‌ಪೆಕ್ಟರ್ ಅಂತಾ ಪೊಲೀಸರಿಗೇ ಅವಾಜ್ ಹಾಕಿದ್ದಾನೆ. ಸೆಲ್ಫಿ ತೆಗಯೋಕೆ ಅವಕಾಶ ಮಾಡಿಕೊಡ್ತಿಲ್ಲ ಅಂತಾ ಪೊಲೀಸ್ರಿಗೆ ಅವಾಜ್ ಹಾಕಿದ್ದಾನೆ. ಮತ್ತೊಂದು ಕಡೆ ಯುವತಿಯೊಬ್ಬಳು ಎಣ್ಣೆ ಕಿಕ್‌ನಲ್ಲಿ ಯುವಕನೊಂದಿಗರ ರಂಪಾಟ ಮಾಡಿಕೊಂಡಿದ್ದಾಳೆ.
ಇನ್ನೂ 12:30 ಗಂಟೆ ಕಳೆಯುತ್ತಿದ್ದಂತೆ ಸೆಲಬ್ರೇಷನ್ ಬಂದ್ ಮಾಡುವಂತೆ ಪೊಲೀಸರು ಸೂಚಿಸ್ತಿದ್ದಾರೆ. ಎಲ್ಲಾ ಪಬ್‌ಗಳಲ್ಲಿ ಡಿಜೆ ನಿಲ್ಲಿಸಿ ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ: Happy New Year 2026: 2025ಕ್ಕೆ ಗುಡ್‌ಬೈ 2026ಕ್ಕೆ ವೆಲ್ಕಮ್
ಧನ್ಯವಾದ ಸಮರ್ಪಣೆ
ಕಳೆದ ವರ್ಷ ಆಗಿದ್ದಂತಹ ರಾದ್ಧಾಂತಗಳು ಈ ಬಾರಿ ತಪ್ಪಿತ್ತು. ಸಂಭ್ರಮಾಚಣೆ ಶಾಂತಿಯುತ ಹಾಗೂ ಸಂಭ್ರಮದಿಂದಲೇ ನೆರವೇರಿತು. ಹೀಗಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಧನ್ಯವಾದ ಅರ್ಪಿಸಿದ್ರು. ಸಾರ್ವಜನಿಕರು ಹಾಗೂ ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿ ಸಹಕರಿಸಿದ್ದಾರೆ. ಎಲ್ಲವೂ ಶಾಂತಿಯುತವಾಗಿ ನೆರವೇರಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.



