Happy New Year 2026: 2025ಕ್ಕೆ ಗುಡ್‌ಬೈ 2026ಕ್ಕೆ ವೆಲ್​ಕಮ್

1 Min Read

ಬೆಂಗಳೂರು: ಹೊಸ ವರ್ಷವನ್ನು (New Year) ಇಡೀ ವಿಶ್ವವೇ ಸಂಭ್ರಮಿಸುತ್ತಿದ್ದು ಬೆಂಗಳೂರಿನಲ್ಲಂತೂ (Bengaluru) ನ್ಯೂ ಇಯರ್‌ಗೆ ಗ್ರ್ಯಾಂಡ್ ವೆಲ್‍ಕಂ ಸಿಕ್ಕಿದೆ.

ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಂತೂ ಜನಸಾಗರವೇ ಸೇರಿತ್ತು. ಪಬ್‌ಗಳಲ್ಲಿ (Pub) ರಾತ್ರಿ 11:59 ನಿಮಿಷದಿಂದ ಕೌಂಟ್‌ಡೌನ್‌ ಆರಂಭವಾಯಿತು. ಕೊನೆಯ 5 ಸೆಕೆಂಡ್‌ ಇದ್ದಾಗ ಜನರು 5,4,3,2,1 ಎಣಿಸುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಹಾಡು, ಕುಣಿತ, ಡ್ಯಾನ್ಸ್, ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಬಾರ್, ಪಬ್, ಕ್ಲಬ್‍ಗಳಲ್ಲಿ ಸೇರಿದ್ದ ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿದರು.

ಹೊಸ ವರ್ಷದ ಸಂಭ್ರಾಚರಣೆ ಜೋರು ನಡೆಯುವ ಎಂಜಿ ರೋಡ್, ಬ್ರಿಗೇಡ್ ರೋಡ್ ರಸ್ತೆಗಳು ದೀಪಾಲಂಕಾರದಿಂದ ಮಿಂಚುತ್ತಿದ್ದವು. ಈ ಸ್ಥಳಗಳಿಗೆ ಬರಲು ಸಾಧ್ಯವಾಗದವವರು ಮನೆಯ ಬಳಿಯೇ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮಿಸಿದರು. ಪ್ರೇಮಿಗಳು ಕೈ ಕೈ ಹಿಡಿದು ನಗರದ ಮುಖ್ಯ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಹೊಸ ವರ್ಷಾಚರಣೆ – ಬೆಂಗಳೂರಿನ ಎಲ್ಲಾ ಫ್ಲೈಓವರ್‌ ಬಂದ್‌

 

ನಗರದ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಚ್‌ಟವರ್‌ಗಳಿಂದ ನಿಗಾ ವಹಿಸಲಾಗುತ್ತಿದೆ.

ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಹೆಚ್ಚುವರಿ ಮಹಿಳಾ ಸಿಬ್ಬಂದಿ, ಸೇಫ್ಟಿ ಐಲ್ಯಾಂಡ್‌ಗಳು, ವುಮೆನ್ ಶೆಲ್ಟರ್‌ಗಳು ಮತ್ತು ಸಹಾಯವಾಣಿ ವ್ಯವಸ್ಥೆ ಮಾಡಲಾಗಿತ್ತು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು

ಬೆಂಗಳೂರು ಮಾತ್ರವಲ್ಲ ಜಿಲ್ಲೆಗಳಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಅದ್ಧೂರಿಯಾಗಿದೆ. ಕಡಲನಗರಿ ಮಂಗಳೂರಿನಲ್ಲಿ ಡಿಜೆ ಸಾಂಗ್‍ಗಳ ಜೊತೆಗೆ ಯಕ್ಷಗಾನದ ಹಾಡುಗಳಿಗೆ ನೃತ್ಯ ಮಾಡಿ ಹೊಸ ವರ್ಷವನ್ನು ಜನ ಸ್ವಾಗತಿಸುತ್ತಿದ್ದಾರೆ.

Share This Article