ಸಾರಿಗೆ ಬಸ್‌, ಲಾರಿ ಮಧ್ಯೆ ಭೀಕರ ಅಪಘಾತ – ಚಾಲಕನ ಕಾಲು ಕಟ್‌

0 Min Read

ಬಾಗಲಕೋಟೆ: ಸಾರಿಗೆ ಬಸ್‌ (Bus) ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮುಧೋಳ ತಾಲೂಕಿನ ಲೋಕಾಪುರ (Lokapura) ಬಳಿ ನಡೆದಿದೆ.

ಡಿಕ್ಕಿ ರಭಸಕ್ಕೆ ಬಸ್ ಮುಂಭಾಗ ಜಖಂಗೊಂಡಿದೆ. ಬಸ್ ಚಾಲಕನ ಕಾಲು ತುಂಡಾಗಿದ್ದು ಪ್ರಯಾಣಿಕರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ – ಸೇವಿಸಿದ್ದ ಏಳು ಮಂದಿ ಸಾವು

ಬೆಳಗಾವಿ-ರಾಯಚೂರು (Belagavi-Raichuru) ರಾಜ್ಯ ಹೆದ್ದಾರಿಯಲ್ಲಿ (State Highway) ಈ ಘಟನೆ ನಡೆದಿದ್ದು ಗಾಯಾಳುಗಳನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article