ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ

1 Min Read

– ಬೀದರ್‌ನ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ದಂಡು

ವಿಜಯಪುರ/ಬೀದರ್: ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವರ್ಷದ ಕೊನೆಯ ದಿನವಾದ ಹಿನ್ನೆಲೆ ವಿಜಯಪುರದ ಸುಪ್ರಸಿದ್ಧ ಗೋಲಗುಂಬಜ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

ನಾಳೆ ಹೊಸ ವರ್ಷ ಆರಂಭವಾಗುತ್ತಿದ್ದು, ಸಾಗರದಂತೆ ಪ್ರವಾಸಿಗರು ಹರಿದು ಬಂದಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯದಿಂದ ಆಗಮಿಸಿ ಜಿಲ್ಲೆಯ ಐತಿಹಾಸಿಕ ತಾಣಗಳ ವೀಕ್ಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿನ್ನೋಟ – 2025ರಲ್ಲಿ ಭಾರತದಲ್ಲಿ ನಡೆದ ಪ್ರಮುಖ ರಾಜಕೀಯ ಘಟನೆಗಳು!

ಇನ್ನೂ  ಬೀದರ್ (Bidar) ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಬೀದರ್‌ನ ಐತಿಹಾಸಿಕ ತಾಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಕ್ಕಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಶೈಕ್ಷಣಿಕ ಪ್ರವಾಸದ ಹಿನ್ನೆಲೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಹಳೆಯ ವರ್ಷಕ್ಕೆ ವಿದಾಯ ಹೇಳುತ್ತಾ ಹೊಸ ವರ್ಷಕ್ಕೆ ಹಾಯ್ ಎನ್ನುತ್ತಿದ್ದಾರೆ.

ಬೀದರ್ ಕೋಟೆ, ಗುರುದ್ವಾರ, ಅಷ್ಟೂರು ಗುಂಬಜ್, ಅನುಭವ ಮಂಟಪ ಸೇರಿದಂತೆ ಬೀದರ್‌ನ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ.ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ `ಪ್ರಾಣ ಪ್ರತಿಷ್ಠಾ ದ್ವಾದಶಿ’: ವಿಶೇಷ ಅಭಿಷೇಕ, ಧಾರ್ಮಿಕ ಸ್ನಾನ

Share This Article