ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿರೋ ಜೈಶಂಕರ್

1 Min Read

ನವದೆಹಲಿ: ಭಾರತದ ವಿದೇಶಾಂಗ ಸಚಿವ ಜೈಶಂಕರ್ (Jaishankar) ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಜಿಯಾ (Khaleda Zia) ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಕಳೆದ ವರ್ಷ ಬಾಂಗ್ಲಾ ದಂಗೆಯಲ್ಲಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೊಳಿಸಿದ ನಂತರ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮನವಿ ಮಾಡಿತ್ತು. ಇದಾದ ಬಳಿಕ ಭಾರತ ಹಾಗೂ ಬಾಂಗ್ಲದ ನಡುವಿನ ಸಂಬಂಧ ಹದಗೆಟ್ಟಿದೆ. ಇನ್ನೂ ಮುಹಮ್ಮದ್ ಯೂನಸ್ ಸರ್ಕಾರದಿಂದ ದೂರವಿದ್ದು, ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಬೇಗಂ ಖಲೀದಾ ಜಿಯಾ ನಿಧನ

ಜಿಯಾ ಅವರ ಅಧಿಕಾರದ ಎರಡೂ ಅವಧಿಗಳಲ್ಲಿ, ಚೀನಾದೊಂದಿಗೆ ತಮ್ಮ ಸಂಬಂಧ ಬಲಪಡಿಸಿದರು. ಬಾಂಗ್ಲಾ ದೇಶಕ್ಕೆ ಮಿಲಿಟರಿ ಉಪಕರಣಗಳನ್ನು ಚೀನಾ ಒದಗಿಸುತ್ತಿತ್ತು. ಇದು ಭಾರತದ ತೀವ್ರ ಅಸಮಾಧಾನಕ್ಕೂ ಕಾರಣವಾಗಿತ್ತು.

ಜಿಯಾ ಅವರ ಮಗ ರೆಹಮಾನ್ 17 ವರ್ಷಗಳ ಗಡಿಪಾರಾಗಿ ವಾಪಸ್‌ ಆಗಿದ್ದು, ಮುಂದಿನ ಚುನಾವಣೆಗೆ ಸಿದ್ಧತೆಯಲ್ಲಿದ್ದಾರೆ. ಈ ಸಮಯದಲ್ಲಿ ಜೈಶಂಕರ್‌ ಬಾಂಗ್ಲಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಪುಟಿನ್‌ ಮನೆ ಮೇಲೆ 91 ಡ್ರೋನ್‌ ದಾಳಿ ನಡೆಸಿತ್ತಾ ಉಕ್ರೇನ್‌ – ಯುದ್ಧ ನಿಲ್ಲಿಸುವ ಮಾತುಕತೆ ಹೊತ್ತಲ್ಲೇ ಟ್ವಿಸ್ಟ್‌

Share This Article