ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ – ಗ್ರಾಮಸ್ಥರಿಗೆ ನಿಶ್ಚಿಂತೆ

1 Min Read

ಮಂಡ್ಯ: ಹಲವಾರು ದಿನಗಳಿಂದ ಜನಜಾನುವಾರುಗಳಿಗೆ ಕಂಟಕ ಪ್ರಾಯವಾಗಿದ್ದ ಚಿರತೆ (Leopard) ಇಂದು ಸೆರೆ ಸಿಕ್ಕಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹರದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರು ಹಲವಾರು ಬಾರಿ ಚಿರತೆ ಕಂಡು ಪ್ರಾಣ ಭಯದಿಂದ ಧೃತಿಗೆಟ್ಟಿದ್ದರು. ಚಿರತೆಯು ಈ ಭಾಗದ ಹಲವಾರು ನಾಯಿಗಳನ್ನ ಎಳೆದೊಯ್ದು ತಿಂದಿದ್ದನ್ನ ಕಣ್ಣಾರೆ ಕಂಡಿದ್ದ ಗ್ರಾಮಸ್ಥರು ನಾಗಮಂಗಲ ತಾಲೂಕು ಅರಣ್ಯ ಇಲಾಖೆಯವರಿಗೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: RSS ಸಂಘಟನಾ ಕೌಶಲ್ಯಕ್ಕೆ ದಿಗ್ವಿಜಯ್ ಸಿಂಗ್ ಮೆಚ್ಚುಗೆ – ಅಡ್ವಾಣಿ ಮುಂದೆ ಮೋದಿ ಕುಳಿತಿರೋ ಫೋಟೋ ಹಂಚಿಕೊಂಡ `ಕೈ’ ನಾಯಕ

ಅರಣ್ಯ ಇಲಾಖೆಯವರು ಬೊಮ್ಮನಹಳ್ಳಿ ಗ್ರಾಮದ ಸಮೀಪ ತಂದಿರಿಸಿದ್ದ ಬೋನಿಗೆ ಇಂದು ಚಿರತೆಯು ಸೆರೆ ಸಿಕ್ಕಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ ಹಾಗೂ ಅರಣ್ಯ ಇಲಾಖೆಯವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಮೂರು ಕಡೆಯಿಂದ ಸುತ್ತುವರಿದು ಚಿನ್ನ ಎಗರಿಸ್ತಿದ್ದ ಕಳ್ಳಿಯರ ಗ್ಯಾಂಗ್ ಅಂದರ್

Share This Article