ಮಾಸ್ಕೋ: ಕಾರಿನ ಕೆಳಗೆ ಇರಿಸಿದ್ದ ಬಾಂಬ್ (Bomb Under Car) ಸ್ಫೋಟಗೋಂಡು ರಷ್ಯಾದ ಹಿರಿಯ ಜನರಲ್ (Russian General) ದುರ್ಮರಣಕ್ಕೀಡಾಗಿರುವ ಘಟನೆ ದಕ್ಷಿಣ ಮಾಸ್ಕೋದಲ್ಲಿ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ (Fanil Sarvarov) ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಪ್ರಮುಖ ಅಪರಾಧಗಳ ವಿಚಾರಣೆ ನಡೆಸುವ ರಷ್ಯಾದ ಉನ್ನತ ಮಟ್ಟದ ಸಮಿತಿ ತನಿಖೆಗಿಳಿದಿದೆ. ಮೇಲ್ನೋಟಕ್ಕೆ ಉಕ್ರೇನ್ ವಿಶೇಷ ಕಾರ್ಯಪಡೆಗಳ ಕೈವಾಡ ಇರುವುದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಹಾರಾಟ ವೇಳೆ ಇಂಜಿನ್ ಸ್ಥಗಿತ – ಟೇಕಾಫ್ ಆದ ಸ್ವಲ್ಪ ಹೊತ್ತಿಗೆ ದೆಹಲಿಗೆ ಏರ್ ಇಂಡಿಯಾ ಫ್ಲೈಟ್ ವಾಪಸ್
2022ರ ಫೆಬ್ರವರಿಯಲ್ಲಿ ಉಕ್ರೇನ್ ಸೈನಿಕರನ್ನ ಬಿಡುಗಡೆ ಮಾಡಿದ ನಂತರ ರಷ್ಯಾ ಮತ್ತು ರಷ್ಯಾ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ದಾಳಿ ನಡೆಯುತ್ತಲೇ ಇದೆ. ರಷ್ಯಾದ ಮಿಲಿಟರಿ ಅಧಿಕಾರಿಗಳು ಹಾಗೂ ರಷ್ಯಾ ಪರ ಇರುವ ಗಣ್ಯವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ಉಕ್ರೇಮ್ ದಾಳಿ ನಡೆಸುತ್ತಿದೆ ಎಂದು ರಷ್ಯಾ ದೂಷಿಸಿದೆ. ಇದನ್ನೂ ಓದಿ: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ
ಈವರೆಗೆ ಮೃತಪಟ್ಟ ರಷ್ಯಾದ ಉನ್ನತ ವ್ಯಕ್ತಿಗಳು
ಜನರಲ್ ಸ್ಟಾಫ್‌ನ ವಿಭಾಗದ ಉಪನಾಯಕ ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಕಳೆದ ಏಪ್ರಿಲ್‌ನಲ್ಲಿ ಮಾಸ್ಕೋ ಬಳಿಯೇ ಕಾರು ಸ್ಫೋಟದಲ್ಲಿ ಹತ್ಯೆಗೀಡಾಗಿದ್ದರು. 2024ರ ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ (Moscow) ಬೂಬಿ-ಟ್ರಾಪ್ಡ್ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ರಷ್ಯಾದ ವಿಕಿರಣಶಾಸ್ತ್ರ, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಇಗೊರ್ ಕಿರಿಲ್ಲೊವ್ ಸಾವನ್ನಪ್ಪಿದ್ರು ಈ ದಾಳಿ ಹೊಣೆಯನ್ನು ಉಕ್ರೇನ್‌ನ ಎಸ್‌ಬಿಯು ಪಡೆ ಹೊತ್ತುಕೊಂಡಿದೆ.
ಇದಕ್ಕೂ ಮುನ್ನ 2023ರ ಏಪ್ರಿಲ್‌ನಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಕೆಫೆಯಲ್ಲಿ ಪ್ರತಿಮೆ ಸ್ಫೋಟಗೊಂಡು ರಷ್ಯಾದ ಮಿಲಿಟರಿ ಬ್ಲಾಗರ್ ಮ್ಯಾಕ್ಸಿಮ್ ಫೋಮಿನ್ ಸಾವನ್ನಪ್ಪಿದರು. 2022ರ ಆಗಸ್ಟ್‌ನಲ್ಲಿ ವಿಚಾರವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಡೇರಿಯಾ ಡುಗಿನಾ ಕಾರು ಬಾಂಬ್ ದಾಳಿಯಲ್ಲಿ ಹತ್ಯೆಗೀಡಾಗಿದ್ದರು. ಇದನ್ನೂ ಓದಿ: ರಷ್ಯಾ ಸೇನೆ ಸೇರಲು ಒತ್ತಾಯ – ಉಕ್ರೇನ್‌ನಿಂದ SOS ವಿಡಿಯೋ ಹರಿಬಿಟ್ಟ ಗುಜರಾತ್ ವಿದ್ಯಾರ್ಥಿ


