ಮುಂಬೈ: ಮಹಾರಾಷ್ಟ್ರದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಪಡೆದಿದೆ.
ಒಟ್ಟು 246 ನಗರ ಪರಿಷತ್ ಹಾಗೂ 42 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 288 ಸ್ಥಾನಗಳ ಪೈಕಿ 213ರಲ್ಲಿ ವಿಜಯದ ಪತಾಕೆ ಬಾರಿಸಿವೆ. ಬಿಜೆಪಿ ಒಂದೇ 129 ಸೀಟ್ ಗೆದ್ದಿದೆ.
ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟದ ಗೆಲುವಿನ ಓಟವು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿಯನ್ನು ಒಟ್ಟಾರೆಯಾಗಿ 44 ಸ್ಥಾನಗಳಿಗೆ ಸೀಮಿತಗೊಳಿಸಿದೆ.
ಬಿಜೆಪಿ 117 ಪುರಸಭೆ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ 53 ಮತ್ತು ಎನ್‌ಸಿಪಿ 37 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 28, ಎನ್‌ಸಿಪಿ (ಎಸ್‌ಪಿ) ಏಳು ಮತ್ತು ಶಿವಸೇನೆ (ಯುಬಿಟಿ) ಒಂಬತ್ತು ಸ್ಥಾನಗಳನ್ನು ಗೆದ್ದಿದೆ.
ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ ಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆದ್ದರೆ, ಪುರಸಭೆಯ ಅಧ್ಯಕ್ಷರ 28 ಸ್ಥಾನಗಳು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಗೆ ಹೋಗಿವೆ. ಐದು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ.

