ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್

2 Min Read

`ಮಾರ್ಕ್’ ಸಿನಿಮಾದ ಪ್ರಿರಿಲೀಸ್ ಇವೆಂಟ್‌ನಲ್ಲಿ ಕಿಚ್ಚ ಸುದೀಪ್ ವಿರೋಧಿಗಳಿಗೆ ಟಾಂಗ್ ಕೊಡುವಂತೆ ಮಾತನಾಡಿದ್ರು. ಇದೀಗ ದಾವಣಗೆರೆಯಲ್ಲಿ ನಿಂತು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi), ಸುದೀಪ್ (Kiccha Sudeep) ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ. ಡೆವಿಲ್ ಚಿತ್ರದ ವಿಜಯಯಾತ್ರೆ ವೇಳೆ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ನಿಂತು ಸುದೀಪ್ ಮಾತಿಗೆ ಟಕ್ಕರ್ ಕೊಟ್ಟ ವಿಜಯಲಕ್ಷ್ಮಿ, ‘ಕೆಲವರು ದರ್ಶನ್‌ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ಇದಕ್ಕೆಲ್ಲ ನಾವು ಕೋಪ ಮಾಡ್ಕೊಳ್ಳಲ್ಲ, ನೊಂದುಕೊಳ್ಳೋದಿಲ್ಲ, ಬೇಜಾರ್ ಮಾಡ್ಕೊಳ್ಳೋದಿಲ್ಲ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದಾರೆ.

`ಡೆವಿಲ್’ ಚಿತ್ರದ ವಿಜಯಯಾತ್ರೆ ಮಾಡ್ತಿರುವ ದರ್ಶನ್ (Darshan) ಪತ್ನಿ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡ್ತಾ ಬಹಿರಂಗವಾಗಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಜನರ ಗುಂಪಿನ ಮಧ್ಯೆ ಮೈಕ್ ಹಿಡಿದು ಮಾತನಾಡಿರುವ ವಿಜಯಲಕ್ಷ್ಮಿ, ‘ಕೆಲವರು ದರ್ಶನ್‌ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು… ವೀಡಿಯಾಗಳಲ್ಲಿ ಕುಳಿತು ಮಾತಾಡೋದು… ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು. ದರ್ಶನ್ ಅವರು ಹೇಳಿರೋ ಹಾಗೆ ಯಾರ್ ಏನೇ ಮಾತಾಡಿದ್ರೂ ನಾವ್ ನೊಂದುಕೊಳ್ಳಲ್ಲ… ಕೋಪ ಮಾಡ್ಕೊಳ್ಳಲ್ಲ.. ಬೇಜಾರ್ ಮಾಡ್ಕೊಳ್ಳಲ್ಲ. ನಮಗೆ ಬೇಕಾಗಿರುವುದು ಪ್ರೀತಿ ಬೆಂಬಲ ಮಾತ್ರ. ಹೀಗಾಗಿ, ನೀವು ಕೋಪ ಮಾಡ್ಕೊಳ್ಬೇಡಿ, ನೊಂದುಕೊಳ್ಳಬೇಡಿ, ಬೇಜಾರ್ ಮಾಡ್ಕೊಳ್ಳಬೇಡಿ’ ಅಂತ ಫ್ಯಾನ್ಸ್‌ಗೆ ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು – ಕೆಣಕಿದ್ರೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಿ; ಗುಡುಗಿದ ಕಿಚ್ಚ

ಹುಬ್ಬಳ್ಳಿಯಲ್ಲಿ ಮಾರ್ಕ್ ಇವೆಂಟ್ ವೇಳೆ ಕಿಚ್ಚ ಸುದೀಪ್ ವಿರೋಧಿಗಳ ವಿರುದ್ಧ ಸಮರ ಸಾರಿದ್ದರು. ಸುದೀಪ್ ಮಾತು ವೈರಲ್ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಸುದೀಪ್ ಮಾತಿಗೆ ಕೌಂಟರ್ ಕೊಡಲು ಆರಂಭಿಸಿದ್ದರು. ಇದೀಗ ಮುಕ್ತ ವೇದಿಕೆಯಲ್ಲಿ ದರ್ಶನ್ ಪತ್ನಿ ಕೌಂಟರ್ ಕೊಟ್ಟಿದ್ದಾರೆ.

ಸುದೀಪ್ ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ, ‘ಇಷ್ಟು ದಿನ ತಾಳ್ಮೆಯಿಂದ ಇದ್ದದ್ದು ಸಾಕು.. ಯಾರಾದ್ರೂ ನಿಮ್ಮನ್ನು ಕೆಣಕಿದ್ರೆ ನೀವು ಅವರ ಭಾಷೆಯಲ್ಲಿ ಉತ್ತರ ಕೊಡಿ’ ಎಂದಿದ್ದರು. ಈ ತಿಂಗಳ 25 ರಂದು ಮಾರ್ಕ್ ಚಿತ್ರ ಬಿಡುಗಡೆ ಆಗಲಿದೆ. ಆದರೆ, ಕೆಲವರು ಈ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈ ಮೂಲಕ ಹೇಳೋದು ಇಷ್ಟೆ ಯುದ್ಧಕ್ಕೆ ಸಿದ್ಧ. ನಮ್ಮ ಅಭಿಮಾನಿಗಳು ಸುಮ್ಮನೆ ಇರಬೇಡಿ. ಯಾರು ನಿಮ್ಮನ್ನು ಕೆಣಕುತ್ತಾರೋ ಅವರಿಗೆ ಅವರ ಭಾಷೆಯಲ್ಲಿ ಉತ್ತರ ನೀಡಿ. ಇಷ್ಟು ದಿನ ನಾನು ನಿಮಗೆ ತಾಳ್ಮೆಯಿಂದ ಇರಲು ಹೇಳಿದ್ದೆ. ಆದರೆ, ಈಗ ಆ ತಾಳ್ಮೆ ಬೇಡ.. ಯುದ್ಧಕ್ಕೆ ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದರು ಸುದೀಪ್. ಇದೀಗ ಸುದೀಪ್ ಮಾತಿಗೆ ಪ್ರತಿಯಾಗಿ ದರ್ಶನ್ ಪತ್ನಿ ಕೌಂಟರ್ ಕೊಡುವಂತೆ ಮಾತನಾಡಿದ್ದಾರೆ. ಇದನ್ನೂ ಓದಿ: 7ನೇ ವರ್ಷದ ಸಂಭ್ರಮದಲ್ಲಿ ಕೆಜಿಎಫ್ ಚಾಪ್ಟರ್-1

Share This Article