ಮಾದಾವರ-ತುಮಕೂರು ಮೆಟ್ರೋ; ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ DPR ಹೊಣೆ

1 Min Read

– BMRCLಯಿಂದ ಅಧಿಕೃತ ಕಾರ್ಯಾರಂಭ

ಬೆಂಗಳೂರು: ಮಾದಾವರ ಟು ತುಮಕೂರು (Madavara-Tumakuru Metro) ಮೆಟ್ರೋ ಮಾರ್ಗ ವಿಸ್ತರಣೆ ಹಿನ್ನೆಲೆ ಬಿಎಂಆರ್‌ಸಿಎಲ್‌ (BMRCL) ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.

ಮಾದಾವರ ಟು ತುಮಕೂರು ಮೆಟ್ರೋಗೆ ಡಿಪಿಆರ್ ತಯಾರಿಸಲು ಟೆಂಡರ್ ಒಪ್ಪಂದವಾಗಿದೆ. ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ 1.26 ಕೋಟಿಗೆ DPR ತಯಾರಿಸುವ ಟೆಂಡರ್ ಪಡೆದುಕೊಂಡಿದೆ. ಈ ಕುರಿತು ಸಂಸ್ಥೆಗೆ ಅಧಿಕೃತವಾಗಿ ಸ್ವೀಕೃತಿ ಪತ್ರ ಲಭಿಸಿದೆ. ಇದನ್ನೂ ಓದಿ: ತುಮಕೂರಿಗೆ ಮೆಟ್ರೋ – ಡಿಪಿಆರ್‌ ತಯಾರಿಸಲು ಟೆಂಡರ್‌ ಕರೆದ BMRCL

ಮಾದಾವರ, ನೆಲಮಂಗಲ, ದಾಬಸ್ ಪೇಟೆ, ಕ್ಯಾತ್ಸಂದ್ರ, ತುಮಕೂರು ಮಾರ್ಗವಾಗಲಿದೆ. ಮಾದಾವರ-ತುಮಕೂರು ಮಾರ್ಗದ ಉದ್ದ ಸುಮಾರು 59.60 ಕಿಮೀ ಆಗಿದ್ದು, ಇದು ಜಾರಿಗೆ ಬಂದರೆ ಕರ್ನಾಟಕದ ಮೊದಲ ಅಂತರ್‌ ನಗರ ಮೆಟ್ರೋ ಮಾರ್ಗವಾಗುವ ಸಾಧ್ಯತೆ ಇದೆ.

ಐದು ತಿಂಗಳ ಒಳಗೆ ಡಿಪಿಆರ್ ತಯಾರಿಸಿ ಬಿಎಂಆರ್‌ಸಿಎಲ್‌ಗೆ ಸಲ್ಲಿಸಬೇಕು. ಮೆಟ್ರೋ ಮಾರ್ಗದ ವಿವಿಧ ಪರ್ಯಾಯಗಳ ಅಧ್ಯಯನ ಮಾಡಲಾಗುವುದು. ಭೂ-ತಾಂತ್ರಿಕ ತನಿಖೆ, ಸ್ಥಳೀಯ ಸಮೀಕ್ಷೆಗಳು, ಪರಿಸರ ಹಾಗೂ ತಾಂತ್ರಿಕ ಅಂಶಗಳ ವಿಶ್ಲೇಷಣೆ ಮಾಡಲಿದೆ.

ಸದ್ಯ ಗ್ರೀನ್ ಲೈನ್ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಕಾರ್ಯಾಚರಣೆ ಮಾಡುತ್ತಿದೆ. ಡಿಪಿಆರ್ ಸಲ್ಲಿಕೆ ನಂತರ ಕೇಂದ್ರದ ಅನುಮೋದನೆಗೆ ಕಳುಹಿಸಲಾಗುವುದು. ಕೇಂದ್ರದ ಅನುಮೋದನೆ ಸಿಕ್ಕ ನಂತರವಷ್ಟೇ ಅಂತಿಮ‌ ತೀರ್ಮಾನ ಕೈಗೊಳ್ಳಲಾಗುವುದು. ಇದನ್ನೂ ಓದಿ: ನಾಗಸಂದ್ರ – ಮಾದಾವರ ಮೆಟ್ರೋ ಸೇವೆ ನಾಳೆಯಿಂದ ಸಾರ್ವಜನಿಕರಿಗೆ ಲಭ್ಯ

Share This Article