ಯಶ್ ನಾಯಕಿ ಕಿಯಾರಾ ಫಸ್ಟ್ ಲುಕ್.. ಅಬ್ಬಬ್ಬಾ ಬೆಂಕಿ !

1 Min Read

ಯಶ್ (Rocking Star Yash) ನಟಿಸಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ `ಟಾಕ್ಸಿಕ್’ (Toxic) ಚಿತ್ರದ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್ ಆಗಿದೆ. ಇಲ್ಲಿ ಕಿಯಾರಾ ಅಡ್ವಾನಿ (Kiara Adwani) ನಾಡಿಯ ಪಾತ್ರದಲ್ಲಿ ಕಾಣಿಸ್ಕೊಂಡಿರುವ ಲುಕ್‌ನ್ನ ಚಿತ್ರತಂಡ ರಿಲೀಸ್ ಮಾಡಿದೆ. ಇದುವರೆಗೂ ಚಿತ್ರದ ನಾಯಕಿಯ ಕುರಿತು ಟಾಕ್ಸಿಕ್ ತಂಡ ಅಧಿಕೃತ ಘೋಷಣೆ ಮಾಡಿರಲಿಲ್ಲ. ಇದೀಗ ಗ್ಲ್ಯಾಮರಸ್‌ ಲುಕ್‌ನಲ್ಲಿ ನಾಯಕಿಯನ್ನ ಪರಿಚಯಿಸಲಾಗಿದೆ.

`ಟಾಕ್ಸಿಕ್’ ಚಿತ್ರದಲ್ಲಿ ಐವರು ನಾಯಕಿಯರಿದ್ದು, ಕಿಯಾರಾ ಅಡ್ವಾನಿ ಕೂಡ ಒಬ್ಬರು. ಕಿಯಾರಾ ಜೊತೆ ನಯನತಾರಾ, ತಾರಾ ಸುತಾರಿಯಾ , ಹುಮಾ ಖುರೇಶಿ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇದೀಗ ಯಶ್‌ಗೆ ನಾಯಕಿಯಾಗಿರುವ ಕಿರಯಾರಾ ಅಡ್ವಾನಿಯವರ ಜಬರ್ದಸ್ತ್ ಲುಕ್ ರಿವೀಲ್ ಆಗಿದೆ. ಹಾಲಿವುಡ್ ಹೀರೋಯಿನ್ ಲುಕ್‌ನಲ್ಲಿ ಕಿಯಾರಾ ಕಂಗೊಳಿಸಿದ್ದಾರೆ.ಇದನ್ನೂ ಓದಿ: ಹೊಸ ವರ್ಷಕ್ಕೆ ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಶೂಟಿಂಗ್ ಶುರು

ಮುಂದಿನ ವರ್ಷದ ಮಾರ್ಚ್ 19ಕ್ಕೆ ಟಾಕ್ಸಿಕ್ ರಿಲೀಸ್‌ಗೆ ಸಿದ್ಧವಿದೆ. ಯಶ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸುವ ಎಲ್ಲಾ ಸೂಚನೆಯನ್ನ ದೃಶ್ಯಗಳು ಕಟ್ಟಿ ಕೊಡುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹಾಲಿವುಡ್‌ಗೆ ತೆಗೆದುಕೊಂಡು ಹೋಗುವ ಚಾಲೆಂಜ್ ಮಾಡಿದ್ದ ಯಶ್ ಆ ಸುಳಿವನ್ನ ಬಿಟ್ಟುಕೊಡುತ್ತಿದ್ದಾರೆ. ಇದೀಗ ನಾಯಕಿಯ ಕುರಿತು ಆಫಿಷಿಯಲ್ ಘೋಷಣೆ ನಡೆದಿದೆ. ಕಿಯಾರಾ ಗರ್ಭಿಣಿ ಆಗೋದಕ್ಕೂ ಮುನ್ನ ನಟಿಸಿರುವ ಸಿನಿಮಾ ಇದು. ಇದೀಗ ಮಗುವಿನ ಆರೈಕೆಯಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿರುವ ಕಿಯಾರಾ ಈ ಫಸ್ಟ್ ಲುಕ್‌ನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಆಕರ್ಷಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

Share This Article