ಶಬರಿಮಲೆ ಚಿನ್ನ ಕಳ್ಳತನ ಕೇಸ್ – ಆರೋಪಿ ಮಾಸ್ಟರ್ ಪ್ಲ್ಯಾನ್‌ಗೆ ಕೇರಳ SIT ಶಾಕ್

2 Min Read

-42.8 ಕೆಜಿ ಇದ್ದ ಚಿನ್ನ 38.25 ಕೆಜಿ ಆಗಿದ್ದೇ ಬಲು ರೋಚಕ

ಬಳ್ಳಾರಿ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಉನ್ನಿಕೃಷ್ಣನ್ ಮಾಡಿದ್ದ ಮಾಸ್ಟರ್ ಪ್ಲ್ಯಾನ್‌ ಕೇಳಿ ಕೇರಳ ಎಸ್‌ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಕೇರಳ ಎಸ್‌ಐಟಿ ನಡೆಸುತ್ತಿರುವ ತನಿಖೆ ವೇಳೆ ಸಿನಿಮೀಯ ರೀತಿಯ ದರೋಡೆಯ ಪ್ಲ್ಯಾನ್‌ ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪ್ಲ್ಯಾನ್‌ ಕೇಳಿ ಸಿನಿಮಾ ನೋಡಿದ ಅನುಭವ ಆಯ್ತು ಎಂದು ಅಧಿಕಾರಿಗಳು ದಂಗಾಗಿದ್ದಾರೆ. ಇದನ್ನೂ ಓದಿ: ಯಾರಿಗೆ ಹೇಳ್ತೀರಾ ಹೇಳಿ..: ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಲ್ಲಿ MLC ತಡೆದು ಅನುಚಿತ ವರ್ತನೆ

ಎಸ್‌ಐಟಿ ಮಾಹಿತಿ ಪ್ರಕಾರ, ದೇಗುಲ ಬಿಡೋದಕ್ಕೂ ಮೊದಲು 2019ರ ಜುಲೈನಲ್ಲಿ ಚಿನ್ನದ ತೂಕ ಮಾಡಿದಾಗ 42.8 ಕೆಜಿ ಇತ್ತು. ಆದರೆ ಅದು ಕೇರಳದಿಂದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ತಲುಪಿದ ಬಳಿಕ ತೂಕ 38.25 ಕೆ.ಜಿ ಆಗಿತ್ತು. ಅಂದರೆ ಅಯ್ಯಪ್ಪನ ಗುಡಿ ಚಿನ್ನದ ಬಾಗಿಲು ಹಾಗೂ ದ್ವಾರಪಾಲಕರು ಕೇರಳದಿಂದ ಚೆನ್ನೈ ತಲುಪುವುದರೊಳಗೆ 39 ಕೆಜಿ ಆಗಿತ್ತಂತೆ. ಪ್ರಯಾಣದ ನಡುವೆ ಕೇರಳ, ಕರ್ನಾಟಕ, ಆಂಧ್ರ ಕೆಲವು ಪ್ರಭಾವಿಗಳ ಮನೆಯಲ್ಲಿ ಪೂಜೆ ಮಾಡಿಸಲಾಗಿದೆ. ಈ ಗ್ಯಾಪ್‌ನಲ್ಲಿ ಚಿನ್ನ ಎಗರಿಸಿರುವ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

2019ರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲದ ಎರಡು ಬಾಗಿಲು ಹಾಗೂ 2 ದ್ವಾರಪಾಲಕರಿಗೆ ಚಿನ್ನ ಮರು ಲೇಪನ ಮಾಡಲು ಯೋಜಿಸಲಾಗಿತ್ತು. ತಮಿಳುನಾಡು ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆ ಉಚಿತವಾಗಿ ಚಿನ್ನ ಮರುಲೇಪನ ಮಾಡೋದಾಗಿ ಮನವಿ ಮಾಡಿದ್ದರಿಂದ ಅದೇ ಕಂಪನಿಗೆ ಕೆಲಸ ಕೊಡಲಾಗಿತ್ತು.

ಚೆನ್ನೈಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಿನಿಮಾ ನಟರು, ರಾಜಕಾರಣಿಗಳ ಮನೆಗೆ ಪೂಜೆಗೆ ಒಯ್ಯಲಾಗಿತ್ತು. ಹೀಗಾಗಿ ನಟರು, ರಾಜಕಾರಣಿಗಳ ಮನೆಗೆ ಪೂಜೆಗೆ ಕೊಂಡೊಯ್ದದ್ದು ಯಾಕೆ? ಚಿನ್ನದ ಬಾಗಿಲು ಮರುಲೇಪನ ಮಾಡುವ ಮೊದಲು ಕೇರಳ ಹೈಕೋರ್ಟ್ ಪರ್ಮಿಷನ್ ಪಡೆದಿಲ್ಲ ಯಾಕೆ? ಪ್ರಭಾವಿ ಭಕ್ತರ ಮನೆಗೆ ಪೂಜೆಗೆ ಒಯ್ಯೋ ಪ್ಲಾನ್ ಮಾಡಿದ್ದು ಯಾರು? ಹಿಂದೆ ಬಾಗಿಲುಗಳಿಗೆ ಚಿನ್ನಲೇಪನ ಮಾಡಿದ ಕಂಪನಿ ಬಿಟ್ಟು ಈಗ ಸ್ಮಾರ್ಟ್ ಕ್ರಿಯೇಷನ್ಸ್ ಕಂಪನಿಗೆ ಮರುಲೇಪನಕ್ಕೆ ಕೊಟ್ಟಿದ್ಯಾಕೆ? ಅನ್ನೋ ಪ್ರಮುಖ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಎಸ್‌ಐಟಿ ಅಧಿಕಾರಿಗಳು ಇದೀಗ ಡ್ರಿಲ್ ಶುರುಮಾಡಲಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದವನೆಂದು ತಪ್ಪು ತಿಳಿದು ಕೇರಳದಲ್ಲಿ ಗುಂಪಿನಿಂದ ಭೀಕರ ಹಲ್ಲೆ – ವಲಸೆ ಕಾರ್ಮಿಕ ಸಾವು

Share This Article