ಯಾರಿಗೆ ಹೇಳ್ತೀರಾ ಹೇಳಿ..: ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಲ್ಲಿ MLC ತಡೆದು ಅನುಚಿತ ವರ್ತನೆ

1 Min Read

– ಕೇಶವ್ ಪ್ರಸಾದ್‌ರ ಪಾಸ್, ಪಿಎ ಮೊಬೈಲ್ ಕಸಿದು ಟೋಲ್ ಮಹಿಳಾ ಸಿಬ್ಬಂದಿ ಗಲಾಟೆ

ವಿಜಯಪುರ: ರಾಷ್ಟ್ರೀಯ ಹೆದ್ದಾರಿ 52ರ ಟೋಲ್‌ನಲ್ಲಿ ಎಂಎಲ್‌ಸಿ ಕೇಶವ ಪ್ರಸಾದ್ (Keshava Prasad) ಅವರನ್ನು ತಡೆದು ಅನುಚಿತ ವರ್ತನೆ ತೋರಿರುವ ಘಟನೆ ನಡೆದಿದೆ.

ವಿಜಯಪುರ ನಗರದ ಹೊರವಲಯದಲ್ಲಿರುವ ಬೆಂಗಳೂರು-ಸೋಲಾಪುರ ಹೈವೇಯಲ್ಲಿರುವ ಟೋಲ್‌ನಲ್ಲಿ ಕೇಶವ ಪ್ರಸಾದ್ ಅವರ ಪಾಸ್ ಹಾಗೂ ಪಿಎ ಮೊಬೈಲ್ ಕಸಿದುಕೊಂಡ ಮಹಿಳಾ ಸಿಬ್ಬಂದಿ ಅನುಚಿತ ವರ್ತನೆ ತೋರಿದ್ದಾರೆ. ಇದನ್ನೂ ಓದಿ: ರಾಜಣ್ಣ ನನಗೂ ಆಪ್ತರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು: ಡಿಕೆಶಿ

ಬರೋಬ್ಬರಿ ಒಂದು ಗಂಟೆಕಾಲ ಎಂಎಲ್‌ಸಿಯನ್ನು ತಡೆದು ಗೊಂದಲ ಸೃಷ್ಟಿಸಿದ್ದಾರೆ. ಮೊಬೈಲ್, ಪಾಸ್ ಕಸಿದು ‘ಯಾರಿಗೆ ಹೇಳ್ತಿರಾ ಹೇಳಿ’ ಎಂದು ಏರುದನಿಯಲ್ಲಿ ಮಾತನಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ನೀವೇ ಎಂಎಲ್‌ಸಿ ಅಂತ ನಾವು ಹೇಗೆ ನಂಬೋದು ಎಂದು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಸಿಬ್ಬಂದಿ ನಡೆಯಿಂದ ಬೇಸತ್ತ ಪ್ರಸಾದ್ ಅವರು ಎಸ್ಪಿ ಲಕ್ಷ್ಮಣ ನಿಂಬರಗಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣಾ ಪೊಲೀಸರು ದೌಡಾಯಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಬಂಧನ ಭೀತಿಯಿಂದ ರಾಜ್ಯದಿಂದ ರಾಜ್ಯಕ್ಕೆ ಬೈರತಿ ಅಜ್ಞಾತ – ಮಾಜಿ ಸಚಿವನಿಗಾಗಿ ಸಿಐಡಿಯ 3 ತಂಡ ತೀವ್ರ ತಲಾಶ್

ಸ್ಥಳದಲ್ಲಿ ಬಿಜೆಪಿ ಕಾರ್ತಕರ್ತರು ಕೂಡ ಜಮಾವಣೆಗೊಂಡಿದ್ದರು. ಕೆಲ ಕಾಲ ಟೋಲ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಒಂದೂವರೆ ಗಂಟೆ ನಂತರ ಸ್ಥಳಕ್ಕೆ ಟೋಲ್ ಅಧಿಕಾರಿ ಭೇಟಿದರು. ಆಗ ಟೋಲ್ ಅಧಿಕಾರಿಯನ್ನ ಬಿಜೆಪಿ ಕಾರ್ಯಕರ್ತರು ತರಾಟೆಗೆ ತಗೆದುಕೊಂಡರು. ಅನುಚಿತ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಕೊನೆಗೆ ಪೊಲೀಸರು ಗೊಂದಲ ನಿವಾರಣೆ ಮಾಡಿದರು.

Share This Article