ಕೊಪ್ಪಳ: ಆನೆಗೊಂದಿ ತೂಗು ಸೇತುವೆ ನಿರ್ಮಾಣ ಸಂಸ್ಥೆಗೆ ಸರ್ಕಾರ ಬಡ್ಡಿ ಸಹಿತ 5.63 ಕೋಟಿ ರೂ. ಪರಿಹಾರ ನೀಡಬೇಕು ಎಂಬ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ (High Court) ತಳ್ಳಿಹಾಕಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ (State Govt) ಬಿಗ್ ರಿಲೀಫ್ ನೀಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗದೇ ಸರ್ಕಾರಕ್ಕೆ ತಲೆನೋವು ತಂದಿದ್ದು, ಸದ್ಯ ನಿರಾಳತೆ ಸಿಕ್ಕಿದೆ.
ಕೊಪ್ಪಳದ (Koppal) ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ ಗ್ರಾಮದ ಬಳಿಯ ತಳವಾರಘಟ್ಟ ಮತ್ತು ವೆಂಕಟಾಪುರ ಗ್ರಾಮದ ಮಧ್ಯೆ ನಿರ್ಮಾಣ ಹಂತದಲ್ಲಿದ್ದ ತೂಗು ಸೇತುವೆ ಕುಸಿದು ಬಿದ್ದ ಪ್ರಕರಣ ಮತ್ತೇ ಮುನ್ನೆಲೆಗೆ ಬಂದಿತ್ತು. ನಿರ್ಮಾಣ ಹಂತದಲ್ಲಿ ಸೇತುವೆ ಕುಸಿದು ಬಿದ್ದಿದ್ದರಿಂದ ಗುತ್ತಿಗೆ ಪಡೆದ ಕಂಪನಿ, ತಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದು ಸಮಸ್ಯೆಗೆ ಕಾರಣವಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಿರ್ವಹಣೆ ಗುತ್ತಿಗೆ ಪಡೆದಿದ್ದ ಸಂಸ್ಥೆ, 3 ಸಾವಿರ ಕೋಟಿ ರೂ. ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದ ಹೈಕೋರ್ಟ್ ಪೀಠ ತಳ್ಳಿ ಹಾಕಿದೆ.ಇದನ್ನೂ ಓದಿ: ಸಿಸಿಟಿವಿ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ: ಕೆಇಎ
ಅಧಿಕಾರಿಗಳ ತಪ್ಪು:
ಕಳೆದ 2009ರಲ್ಲಿ ನಿರ್ಮಾಣ ಹಂತದಲ್ಲಿ ತೂಗು ಸೇತುವೆ ಕುಸಿದು ಬಿದ್ದು ಸಾವು-ನೋವು ಸಂಭವಿಸಿತ್ತು. ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಕಂಪನಿಯೇ ತಮಗೆ ನಷ್ಟವಾಗಿದ್ದು, ಪರಿಹಾರ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಗಂಗಾವತಿ ತಾಲೂಕು ನ್ಯಾಯಾಲಯ, ಬಳ್ಳಾರಿಯ ವಾಣಿಜ್ಯ ನ್ಯಾಯಾಲಯ, ಬಳಿಕ ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿತ್ತು. ಕೊಪ್ಪಳ ನ್ಯಾಯಾಲಯ ಗುತ್ತಿಗೆ ಸಂಸ್ಥೆಗೆ 3,000 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ಮಾಡಿತ್ತು.
ಆಗ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ನ ತ್ರಿಸದಸ್ಯ ಪೀಠ 3,000 ಕೋಟಿ ರೂ. ಬಡ್ಡಿ ಸಮೇತ ನೀಡಬೇಕು ಎಂಬ ಆದೇಶವನ್ನು ತಳ್ಳಿ ಹಾಕಿದೆ. ಸುದೀರ್ಘ 16 ವರ್ಷದ ಬಳಿಕ ಧಾರವಾಡದ ಹೈಕೋರ್ಟ್ ನೀಡಿದ ಆದೇಶದಿಂದ ಸರ್ಕಾರ ನಿಟ್ಟುಸಿರು ಬಿಡುವಂತೆ ಮಾಡಿದೆ. ಗುತ್ತಿಗೆ ಸಂಸ್ಥೆ ಕೋರ್ಟ್‌ಲ್ಲಿ ಕಾನೂನು ಹೋರಾಟ ಮಾಡುವಾಗ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿ ಸೂಕ್ತ ದಾಖಲೆ ನೀಡಿರಲಿಲ್ಲ. ಇದರಿಂದ ವ್ಯತಿರಿಕ್ತವಾಗಿ ಆದೇಶ ಬರಲು ಕಾರಣವಾಗಿತ್ತು.
ಏನಿದು ಪ್ರಕರಣ?
ಒಟ್ಟು 7 ಕೋಟಿ ರೂ. ಮೊತ್ತದ ತೂಗುಸೇತುವೆ ಕಾಮಗಾರಿ ಹೈದ್ರಾಬಾದ್ ಮೂಲದ ಬಿ.ವಿ.ರೆಡ್ಡಿ ಅಂಡ್ ಕಂಪನಿ ಟೆಂಡರ್ ಪಡೆದುಕೊಂಡಿತ್ತು. ತಾಂತ್ರಿಕ ಕಾರಣಕ್ಕೆ ತೂಗುಸೇತುವೆ ನಿರ್ಮಾಣ ಹಂತದಲ್ಲಿ ಕುಸಿದು ಬಿದ್ದು, ಎಂಟು ಜನ ಮೃತಪಟ್ಟಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವೈಫಲ್ಯದಿಂದ ಘಟನೆ ನಡೆದಿದೆ. ನಮಗೆ ಆರ್ಥಿಕ ಹಾನಿಯಾಗಿದೆ. ಕಾಮಗಾರಿಯ ಮೊತ್ತ ಏಳು ಕೋಟಿ ರೂ. ಪಾವತಿಸುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿ, 2009ರಲ್ಲಿ ಗಂಗಾವತಿಯ ನ್ಯಾಯಾಲಯದಲ್ಲಿ ಗುತ್ತಿಗೆ ಸಂಸ್ಥೆ ಮೊಕದ್ದಮೆ ಹೂಡಿತ್ತು.ಇದನ್ನೂ ಓದಿ: ಜಿಬಿಎ 5 ಪಾಲಿಕೆ ಚುನಾವಣೆ – ಸರ್ಕಾರದಿಂದ ಮೀಸಲಾತಿ ಮಾರ್ಗಸೂಚಿ ಪ್ರಕಟ

