ಅಡ್ಡಾದಿಡ್ಡಿ ಕಾರು ಚಾಲನೆ – ಬಿಇ ವಿದ್ಯಾರ್ಥಿ ಎಡವಟ್ಟಿಗೆ ವೃದ್ಧ ಬಲಿ

1 Min Read

ಬೆಂಗಳೂರು: ಯುವಕನ ಅಡ್ಡಾದಿಡ್ಡಿ ಕಾರು ಚಾಲನೆಯಿಂದ ವೃದ್ಧನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ನಗರದ (Bengaluru City) ಆರ್‌ಎಂವಿ ಎಕ್ಸ್‌ಟೆನ್ಷನ್‌ ಬಳಿ ನಡೆದಿದೆ.

ಶಿಶಿರ್ ಸುಧೀರ್ ಪಾಟೀಲ್ (19) ಎಂಬ ಯುವಕನಿಂದ ಅಪಘಾತ ನಡೆದಿದ್ದು, ಚಂದ್ರಶೇಖರ ರೆಡ್ಡಿ (64) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೃದ್ಧನಿಗೆ ಗುದ್ದಿದ ಬಳಿಕ ಸಿಯಾಜ್‌ ಕಾರು ಅಲ್ಲೇ ನಿಂತಿದ್ದ ಎರ್ಟಿಗಾ ಕಾರಿಗೂ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವೃದ್ಧ ಹಾರಿಬಿದ್ದು ಸಾವನ್ನಪ್ಪಿದ್ದಾರೆ.

ಇನ್ನೂ ಮೃತ ಚಂದ್ರಶೇಖರ್‌ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು ಅನ್ನೋ ಮಾಹಿತಿಯಿದ್ದರೆ, ಬಿಇ ಪ್ರಥಮ ಸೆಮಿಸ್ಟರ್‌ ವ್ಯಾಸಂಗ ಮಾಡುತ್ತಿದ್ದಾನೆ ಅನ್ನೋ ಮಾಹಿತಿ ಇದೆ.

ಇನ್ನೂ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ-ಯುವತಿಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸಂಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article