ದಟ್ಟ ಮಂಜು – ನಾಲ್ಕನೇ ಟಿ20 ಪಂದ್ಯ ರದ್ದು

1 Min Read

ಲಕ್ನೋ: ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ದಟ್ಟ ಮಂಜುನಿಂದಾಗಿ(Excessive Fog) ರದ್ದುಗೊಳಿಸಲಾಗಿದೆ.

ಪ್ರತಿಕೂಲ ಹವಾಮಾನದಿಂದಾಗಿ (Weather) ಪಂದ್ಯದ ಟಾಸ್ ವಿಳಂಬವಾಗಿತ್ತು.  ಸಂಜೆ 6:30ಕ್ಕೆ ಟಾಸ್‌ ಪ್ರಕ್ರಿಯೆ ನಡೆಯಬೇಕಿತ್ತು. ಹಲವು ಬಾರಿ ಅಂಪೈರ್‌ಗಳು ಮೈದಾನಕ್ಕೆ ಇಳಿದು ಪಿಚ್‌ ಪರಿಶೀಲಿಸಿದ್ದರು.  ಇದನ್ನೂ ಓದಿ:  ಅನ್‌ಕ್ಯಾಪ್‌ ಪ್ಲೇಯರ್‌ ಮಂಗೇಶ್‌ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?

ಪ್ರತಿಬಾರಿ ಮೈದಾನಕ್ಕೆ ಇಳಿದಾಗ ಮುಂದೆ ಪಂದ್ಯ ಆರಂಭವಾಗಬಹುದುಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ರಾತ್ರಿ 9:25ಕ್ಕೆ ಅಂಪೈರ್‌ಗಳು ಪಂದ್ಯವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡರು.

ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕೊನೆ ಪಂದ್ಯವನ್ನು ಆಫ್ರಿಕಾ ಗೆದ್ದುಕೊಂಡರೆ ಸರಣಿ 2-2 ರಲ್ಲಿ ಸಮವಾಗಲಿದೆ.  ಇದನ್ನೂ ಓದಿ:   ಕ್ಯಾಮರೂನ್‌ ಗ್ರೀನ್‌ 25.20 ಕೋಟಿಗೆ ಸೇಲಾದ್ರೂ ಸಿಗೋದು 18 ಕೋಟಿ!

ಮೊದಲ ಪಂದ್ಯವನ್ನು ಭಾರತ 101 ರನ್‌ಗಳಿಂದ ಜಯ ಸಾಧಿಸಿದರೆ ಎರಡನೇ ಪಂದ್ಯವನ್ನು ಆಫ್ರಿಕಾ 51 ರನ್‌ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯದಲ್ಲಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನದಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತ್ತು.

Share This Article